ನಿರ್ದೇಶಕರು/ಹಿರಿಯ ಆಡಳಿತಮಂಡಳಿಗೆ ನೀತಿ ಸಂಹಿತೆ

ಪೀಠಿಕೆ:

ಎಲ್ಲಾ ನಿರ್ದೇಶಕರು ಹಾಗೂ ಹಿರಿಯ ಆಡಳಿತಮಂಡಳಿ ಅವರಿಗೆ ವಹಿಸಲ್ಪಟ್ಟ ಪ್ರಾಧಿಕಾರದ ಪರಿಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಹಾಗೂ ಸೂಚಿಸಲ್ಪಟ್ಟ ನಿರ್ಧಾರಗಳು ಮತ್ತು ನಿಯಮಗಳನ್ನು ಕಂಪನಿ ಹಾಗೂ ಅದರ ಷೇರುದಾರರ ಹಿತಾಸಕ್ತಿಗೆ ಅನುಗುಣವಾಗುವಂತೆ ನಿರ್ಧರಿಸಿ, ಕ್ರಮತೆಗೆದುಕೊಳ್ಳಬೇಕು.

ಕಂಪನಿಗೆ ಅಗತ್ಯವಾದ ಉನ್ನತ ಗುಣಮಟ್ಟವನ್ನು ನಿರ್ವಹಿಸಲು, ಸಮಿತಿಯ ಎಲ್ಲಾ ಚಟುವಟಿಕೆಗಳಲ್ಲಿ ಕೆಳಗಿನ ನಿಯಮ/ನೀತಿಸಂಹಿತೆಗಳನ್ನು ಗಮನಿಸಬೇಕು. ಕಂಪನಿಯು ಸಂಹಿತೆಯ ಉದ್ದೇಶಕ್ಕಾಗಿ ಅನುಸರಣಾ ಅಧಿಕಾರಿಯಾಗಿ ಕಂಪನಿ ಕಾರ್ಯದರ್ಶಿಯನ್ನು ನೇಮಿಸುತ್ತದೆ, ಇವರು ನಿರ್ದೇಶಕರು ಮತ್ತು ಹಿರಿಯ ಆಡಳಿತಮಂಡಳಿಯ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಂಹಿತೆಯೊಂದಿಗೆ ಅನುಸರಣೆಯನ್ನು ಹೊಂದಲು ಲಭ್ಯವಿರುತ್ತಾರೆ.

1. ಪ್ರಾಮಾಣಿಕತೆ ಮತ್ತು ಸಮಗ್ರತೆ:

ಎಲ್ಲಾ ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ತಮ್ಮ ಚಟುವಟಿಕೆಗಳನ್ನು, ಕಂಪನಿಯ ಪರವಾಗಿ ಮತ್ತು ಅವರ ವೈಯಕ್ತಿಕತೆಯ ಪರವಾಗಿ ಪ್ರಾಮಾಣಿಕತೆ, ಸಮಗ್ರತೆ ಮತ್ತು ಸ್ಪಷ್ಟತೆಯಿಂದ ನಿರ್ವಹಿಸಬೇಕು. ಎಲ್ಲಾ ನಿರ್ದೇಶಕರು ಹಾಗೂ ಹಿರಿಯ ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ಕೆಳಗಿನ ಅಧಿಕಾರಿಗಳಿಗೆ ತಮ್ಮ ಸ್ವಂತ ನಿರ್ಣಯವನ್ನು ಹೇರಲು ಅನುಮತಿಸದೇ ಉತ್ತಮ ವಿಶ್ವಾಸ, ಜವಾಬ್ದಾರಿ, ಸೂಕ್ತ ಕಾಳಜಿ, ಸ್ಪರ್ಧೆ ಮತ್ತು ಪ್ರತಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ಕಂಪನಿಯ ಹಿತಾಸಕ್ತಿಗಾಗಿ ಹಾಗೂ ಸಾರ್ವಜನಿಕ ವಿಶ್ವಾಸದ ಬದ್ಧತೆಯನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸಬೇಕು.

2. ಹಿತಾಸಕ್ತಿಯ ಸಂಘರ್ಷ:

ಕಂಪನಿಯ ಸಮಿತಿಯಲ್ಲಿರುವ ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ಕಂಪನಿ ಅಥವಾ ಅದರ ಸಮೂಹದ ಹಿತಾಸಕ್ತಿಗೆ ಸಂಘರ್ಷವನ್ನು ಉಂಟುಮಾಡುವ ಯಾವುದೇ ಉದ್ದಿಮೆ, ಸಂಬಂಧ ಅಥವಾ ಚಟುವಟಿಕೆಯನ್ನು ಹೊಂದಿರಬಾರದು.

ಅನೇಕ ಸಂದರ್ಭಗಳಲ್ಲಿ ಸಂಘರ್ಷ ಉಂಟಾಗುತ್ತದೆ. ಪ್ರತಿಯೊಂದು ಸಂಭಾವ್ಯ ಸಂಘರ್ಷದ ಸನ್ನಿವೇಶಗಳನ್ನು ಮರೆಮಾಡಲು ಸಾಧ್ಯವಿಲ್ಲ ಮತ್ತು ಕೆಲವೊಮ್ಮೆ, ಸೂಕ್ತ ಮತ್ತು ಅಸಮರ್ಪಕ ಚಟುವಟಿಕೆಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಸುಲಭವಲ್ಲ. ಕೆಳಗೆ ಹಿತಾಸಕ್ತಿಗೆ ಧಕ್ಕೆ ತರುವ ಕೆಲವು ವಾಸ್ತವ ಅಥವಾ ಸಂಭಾವ್ಯ ಸನ್ನಿವೇಶಗಳನ್ನು ನೀಡಲಾಗಿದೆ:

  • ನಿರ್ದೇಶಕರು ಮತ್ತು ಹಿರಿಯ ಆಡಳಿತಮಂಡಳಿ ಕಂಪನಿಯ ಸಾಧನೆ ಅಥವಾ ಜವಾಬ್ದಾರಿಗೆ ಅಡ್ಡಿಯುಂಟುಮಾಡುವ ಯಾವುದೇ ಚಟುವಟಿಕೆ/ಉದ್ಯೋಗದಲ್ಲಿ ತೊಡಗುವಂತಿಲ್ಲ ಅಥವಾ ಕಂಪನಿಯ ಕುರಿತು ಯಾವುದೇ ಪೂರ್ವಾಗ್ರಹ ಹೊಂದುವಂತಿಲ್ಲ ಅಥವಾ ಸಂಘರ್ಷ ನಡೆಸುವಂತಿಲ್ಲ.
  • ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ಹಾಗೂ ಅವರ ಸಮೀಪದ ಕುಟುಂಬ ಕಂಪನಿಗೆ ತಮ್ಮ ಜವಾಬ್ದಾರಿಯನ್ನು ಹೊಂದಾಣಿಕೆ ಮಾಡುವಂತೆ ಯಾವುದೇ ಕಂಪನಿಯಲ್ಲಿ ಹೂಡಿಕೆ, ಗ್ರಾಹಕ, ಪೂರೈಕೆದಾರ, ಡೆವೆಲಪರ್ ಅಥವಾ ಸ್ಪರ್ಧಿ ಹಾಗೂ ಹೂಡಿಕೆಗಳಿಂದ ಸಾಮಾನ್ಯವಾಗಿ ದೂರವಿರಬೇಕು.
  • ನಿರ್ದೇಶಕರು ಮತ್ತು ಹಿರಿಯ ಆಡಳಿತಮಂಡಳಿ ಕಂಪನಿಯ ಉದ್ದಿಮೆಯನ್ನು ಸಂಬಂಧಿಯೊಂದಿಗೆ ಅಥವಾ ಸಂಬಂಧಿ/ಸಂಬಂಧಿತ ವ್ಯಕ್ತಿಯು ಪ್ರಮುಖಪಾತ್ರ ವಹಿಸುತ್ತಿರುವ ಸಂಸ್ಥೆ/ಕಂಪನಿಯಲ್ಲಿ ನಡೆಸುವಂತಿಲ್ಲ.

ಇಂತಹ ಸಂಬಂಧಿತ ವ್ಯಕ್ತಿಯ ವಹಿವಾಟು ತಡೆಗಟ್ಟಲಾಗದಿದ್ದಲ್ಲಿ, ಅದನ್ನು ಸಮಿತಿಗೆ ಅಥವಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಂಪೂರ್ಣ ಬಹಿರಂಗಪಡಿಸಬೇಕು

3. ಅನುಸರಣೆ:

ನಿರ್ದೇಶಕರು ಮತ್ತು ಹಿರಿಯ ಆಡಳಿತಮಂಡಳಿ ಪತ್ರದಲ್ಲಾಗಲೀ ಅಥವಾ ಹಿತಾಸಕ್ತಿಯಿಂದಾಗಲೀ ಎಲ್ಲಾ ಅನ್ವಯವಾಗುವ ಕಾನೂನು, ನಿಯಮ ಮತ್ತು ನಿಬಂಧನೆಗಳೊಂದಿಗೆ ಅನುಸರಣೆ ಹೊಂದಿರಬೇಕು.ಕಂಪನಿಯನ್ನು ಕಾನೂನುಬದ್ಧ ಮತ್ತು ನೈತಿಕ ನಡಾವಳಿಯಲ್ಲಿ ನಡೆಸಲು, ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ಯಾವುದೇ ಕಾನೂನು ಉಲ್ಲಂಘನೆ, ನಿಯಮ, ನಿಬಂಧನೆ ಅಥವಾ ನೀತಿಸಂಹಿತೆಯ ಉಲ್ಲಂಘನೆಯ ಕುರಿತು ಕಂಪನಿ ಕಾರ್ಯದರ್ಶಿಗೆ ವರದಿ ಮಾಡಬೇಕು.

4. ಇತರೆ ನಿರ್ದೇಶನದಾಯಿತ್ವ:

ಕಂಪನಿಯು ಇತರೆ ಕಂಪನಿಗಳ ಸಮಿತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುವಾಗ ಹಿತಾಸಕ್ತಿಯ ಸಂಘರ್ಷ ಉಂಟಾಗುವ ಸಾಧ್ಯತೆಯಿದ್ದು, ಈ ಕಾರಣ, ಎಲ್ಲಾ ನಿರ್ದೇಶಕರು ವಾರ್ಷಿಕ ಆಧಾರದ ಮೇಲೆ ಇಂತಹ ಸಂಬಂಧದ ಕುರಿತು ಸಮಿತಿಗೆ ವರದಿ/ಬಹಿರಂಗಪಡಿಸಬೇಕು. ನೇರ ಸ್ಪರ್ಧಿಯ ಸಮಿತಿಯಲ್ಲಿ ಸೇವೆ ಸಲ್ಲಿಸುವುದು ಕಂಪನಿಯ ಹಿತಾಸಕ್ತಿಗೆ ಧಕ್ಕೆ ಮಾಡುತ್ತದೆ.

5. ಮಾಹಿತಿಯ ಗೌಪ್ಯತೆ:

ಕಂಪನಿಯ ಉದ್ದಿಮೆ, ಅದರ ಗ್ರಾಹಕರು, ಪೂರೈಕೆದಾರರು ಇತ್ಯಾದಿ ಸಾರ್ವಜನಿಕ ವಲಯದಲ್ಲಿಲ್ಲದುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ನಿರ್ದೇಶಕರು ಇಂತಹ ಮಾಹಿತಿಗೆ ಪ್ರವೇಶ ಅಥವಾ ಅಧಿಕಾರ ಹೊಂದಿದ್ದಲ್ಲಿ, ಅದನ್ನು ಗೌಪ್ಯತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಕಾನೂನಿಗೆ ಅಗತ್ಯವಿರದ ಹೊರತು ಮತ್ತು ಬಹಿರಂಗಪಡಿಸುವುದು ಅಗತ್ಯ ಎನ್ನುವವರೆಗೂ ವಿಶ್ವಾಸದಿಂದ ಇಡಲಾಗುತ್ತದೆ. ಯಾವುದೇ ನಿರ್ದೇಶಕರು ಮತ್ತು ಹಿರಿಯ ಆಡಳಿತಮಂಡಳಿ ಯಾವುದೇ ಮಾಹಿತಿಯನ್ನು ಔಪಚಾರಿಕವಾಗಿಯಾಗಲೀ ಅಥವಾ ಅನೌಪಚಾರಿಕವಾಗಿಯಾಗಲೀ ಪತ್ರಿಕೆ ಅಥವಾ ಇತರೆ ಯಾವುದೇ ಸಾರ್ವಜನಿಕ ಮಾಧ್ಯಮಕ್ಕೆ, ವಿಶೇಷ ಅಧಿಕಾರವಿರದ ಹೊರತು ನೀಡುವಂತಿಲ್ಲ.

6.ಇನ್ ಸೈಡರ್ ಟ್ರೇಡಿಂಗ್:

ಕಂಪನಿಯ ಯಾವುದೇ ನಿರ್ದೇಶಕ ಮತ್ತು ಹಿರಿಯ ಆಡಳಿತ ಮಂಡಳಿ ಸಾರ್ವಜನಿಕ ವಲಯದಲ್ಲಿಲ್ಲದ ಕಂಪನಿಯ ಕುರಿತಾದ ಮಾಹಿತಿಗೆ ಪ್ರವೇಶ ಮತ್ತು ಸ್ವಾಧೀನತೆಯನ್ನು ನೀಡುವ ಮೂಲಕ, ಇತರರಿಗೆ ಸೌಲಭ್ಯ ಪಡೆಯುವಂತೆ ಅಥವಾ ಹೂಡಿಕೆ ಸಲಹೆ ನೀಡುವ ಮೂಲಕ ಪ್ರಯೋಜನ ಪಡೆಯುವಂತೆ ಮಾಡುವಂತಿಲ್ಲ ಹಾಗೂ ಇದಕ್ಕಾಗಿ ಇನ್ ಸೈಡರ್ ಮಾಹಿತಿ ಸ್ಥಾಪಿಸಲಾಗುತ್ತದೆ. ಎಲ್ಲಾ ನಿರ್ದೇಶಕರೂ ಎಸ್ ಇ ಬಿ ಐ ನಿಂದ ನೀಡಲಾದ ಇನ್ ಸೈಡರ್ ಟ್ರೇಡಿಂಗ್ ಮಾರ್ಗದರ್ಶನಗಳೊಂದಿಗೆ ಅನುಸರಣೆ ಹೊಂದಿರಬೇಕು.

7. ಉಡುಗೊರೆಗಳು ಮತ್ತು ದಾನ:

ಕಂಪನಿಯ ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ನೇರವಾಗಿ ಅಥವಾ ಪರೋಕ್ಷವಾಗಿ, ಉದ್ದಿಮೆಯ ನಿಯಮಾವಳಿಗಳ ನಿರ್ಧಾರದ ಮೇಲೆ ಪರಿಣಾಮ ಬೀರುವ ಅಥವಾ ಉದ್ದಿಮೆಯ ವಿಷಯವನ್ನು ಪಡೆಯುವ (ಅಥವಾ ಸ್ಪರ್ಧಾತ್ಮಕವಲ್ಲದ) ಉದ್ದೇಶದಿಂದ ನೀಡಲಾಗುವ ಯಾವುದೇ ಉಡುಗೊರೆ, ದಾನ, ಅನುದಾನ, ಆತಿಥ್ಯ, ಕಾನೂನುಬಾಹಿರ ಪಾವತಿಗಳು ಮತ್ತು ಹೋಲಿಕೆಯುಳ್ಳ ಸೌಲಭ್ಯಗಳನ್ನು (ಅಥವಾ ಉದ್ದೇಶಿತವಾಗಿ ಗ್ರಹಿಸಿರುವುದನ್ನು) ಪಡೆಯುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಸ್ಮರಣೀಯ ಉದ್ದೇಶದಿಂದ ನೀಡಲಾಗುವ ಸಾಮಾನ್ಯ ಉಡುಗೊರೆಗಳನ್ನು ಸ್ವೀಕರಿಸಬಹುದು ಹಾಗೂ ಈ ಕುರಿತು ಸಮಿತಿಗೆ ವರದಿ ನೀಡಬೇಕು.

8. ಆಸ್ತಿಯ ರಕ್ಷಣೆ:

ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ಕಂಪನಿಯ ಆಸ್ತಿಗಳು, ಕಾರ್ಮಿಕರು ಮತ್ತು ಮಾಹಿತಿಯನ್ನು ರಕ್ಷಿಸಬೇಕು ಹಾಗೂ ಇವುಗಳನ್ನು ಸಮಿತಿಯ ಅನುಮೋದನೆ ಇಲ್ಲದ ಹೊರತು ವೈಯಕ್ತಿಕ ಬಳಕೆಗಾಗಿ ಉಪಯೋಗಿಸುವಂತಿಲ್ಲ.

9. ಗ್ರಾಹಕ ಸಂಬಂಧಗಳು:

ನಿರ್ದೇಶಕರು ಮತ್ತು ಹಿರಿಯ ಆಡಳಿತ ಮಂಡಳಿ ನಮ್ಮ ಗ್ರಾಹಕರಿಗೆ ಮೌಲ್ಯವನ್ನು ನಿರ್ಮಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ವಿಶ್ವಾಸದ ಆಧಾರದಲ್ಲಿ ಸಂಬಂಧ ನಿರ್ಮಿಸಬೇಕು. ಅವರ ಕೆಲಸ ಗ್ರಾಹಕರೊಂದಿಗೆ ಅಥವಾ ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕದಿಂದಿರುವುದಾದಲ್ಲಿ, ಅವರು ಕಂಪನಿಯ ಪ್ರತಿನಿಧಿಗಳಿಗೆ ಸೂಕ್ತವಾಗುವ ವಿಧಾನದಲ್ಲಿ ವರ್ತಿಸಬೇಕು.

10. ಸರ್ಕಾರೀ ಸಂಬಂಧ:

ಅನ್ವಯಿಸುವ ಕಾನೂನು ಮತ್ತು ನಿಬಂಧನೆಗಳೊಂದಿಗೆ ಸರ್ಕಾರೀ ಉದ್ಯೋಗಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುವಾಗ ಮತ್ತು ಸಂಪರ್ಕಿಸುವಾಗ ಸಂಪೂರ್ಣ ಬದ್ಧರಾಗಿರುವುದು ಕಂಪನಿಯ ನಿಯಮವಾಗಿದೆ ಮತ್ತು ಉದ್ದಿಮೆ ನಡಾವಳಿಯ ಅತ್ಯಂತ ನೈತಿಕ, ಮಾನಸಿಕ ಮತ್ತು ಕಾನೂನಾತ್ಮಕ ಮಟ್ಟವಾಗಿದೆ. ಈ ನಿಯಮ ಎಲ್ಲಾ ಕೇಂದ್ರ, ಸ್ಥಳೀಯ, ರಾಜ್ಯ, ಫೆಡರಲ್, ವಿದೇಶೀ ಮತ್ತು ಇತರೆ ಅನ್ವಯವಾಗುವ ಕಾನೂನು, ನಿಯಮ ಮತ್ತು ನಿಬಂಧನೆಗಳೊಂದಿಗೆ ಶಿಸ್ತುಬದ್ಧ ಅನುಸರಣೆ ಹೊಂದಿದೆ.

11. ಕಾಲಕಾಲದ ಪರಿಷ್ಕರಣೆ:

ಪ್ರತೀ ವರ್ಷಕ್ಕೊಮ್ಮೆ ಅಥವಾ ಈ ಸಂಹಿತೆಯ ಪರಿಷ್ಕರಣೆಯ ನಂತರ, ಪ್ರತಿಯೊಬ್ಬ ನಿರ್ದೇಶಕ ಮತ್ತು ಹಿರಿಯ ಆಡಳಿತ ಮಂಡಳಿ ಸಂಹಿತೆಯನ್ನು ಸ್ವೀಕರಿಸಿ, ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅನುಸರಣೆಯ ಕುರಿತು ಒಪ್ಪಿಗೆ ನೀಡಬೇಕು. ಹೊಸ ನಿರ್ದೇಶಕರು ತಮ್ಮ ನಿರ್ದೇಶಕತ್ವದ ಅವಧಿ ಆರಂಭವಾದಾಗ ಮತ್ತು ಹಿರಿಯ ಆಡಳಿತ ಮಂಡಳಿ ಅವರ ಉದ್ಯೋಗ ಆರಂಭವಾಗುವ ಸಮಯದಲ್ಲಿ ಈ ಕುರಿತಾದ ಪತ್ರಕ್ಕೆ ಸಹಿ ಹಾಕಬೇಕು.

12. ವಿನಾಯಿತಿಗಳು:

ಕಂಪನಿಯ ನಿರ್ದೇಶಕರ ಸಮಿತಿಯ ಸದಸ್ಯರಿಗೆ ಅಥವಾ ವಿಶೇಷ ಅಧಿಕಾರಿಗೆ ಈ ಉದ್ದಿಮೆ ನಡಾವಳಿ ಮತ್ತು ನೈತಿಕತೆಯ ಸಂಹಿತೆಯಲ್ಲಿನ ಯಾವುದೇ ಸೌಲಭ್ಯದ ಮೇಲಿನ ವಿನಾಯಿತಿಯನ್ನು ಕಂಪನಿಯ ನಿರ್ದೇಶಕರ ಸಮಿತಿಯಿಂದ ಲಿಖಿತ ರೂಪದಲ್ಲಿ ಪಡೆದ ನಂತರ ಅನುಮೋದನೆ ನೀಡಲಾಗುತ್ತದೆ ಹಾಗೂ ಇದನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸಲಾಗುತ್ತದೆ.

Leave a Reply

Your email address will not be published. Required fields are marked *

*
*
Website