ನಮ್ಮಲ್ಲಿ ಹೆಚ್ಚಿನ ಜನ ಸಾಲದ ಪ್ರಮಾಣವನ್ನು ಹೇಗೆ ನಿರ್ಧರಿಸಿ ನೀಡುತ್ತಾರೆ ಎಂದು ತಿಳಿದಿರುವುದಿಲ್ಲ. ಕೆಲವೊಮ್ಮೆ, ನಾವು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಹಾಗೂ ಒಂದೇ ವೇತನ ತೆಗೆದುಕೊಳ್ಳುವ ಇಬ್ಬರು ವ್ಯಕ್ತಿಗಳು ವಿವಿಧ ಪ್ರಮಾಣದ ಮೊಬಲಗನ್ನು ಸಾಲವಾಗಿ ಪಡೆಯುವುದನ್ನು ನೋಡಿದ್ದೇವೆ. ಇದು ಹೇಗೆ ಸಾಧ್ಯ?

ಸಾಲದ ಅರ್ಹತೆ ಎರಡು ವಿವಿಧ ಲೆಕ್ಕಗಳಲ್ಲಿ ನಡೆಯುತ್ತದೆ.

  • ಪ್ರತೀ ತಿಂಗಳು ಮಾಡಲು ಸಾಧ್ಯವಿರುವ ಸಾಲ  ಮರುಪಾವತಿಯ ಮೊಬಲಗು
  • ಆಸ್ತಿಯ ವೆಚ್ಚದ ಶೇಕಡಾವಾರು

ಈಗ ನಾವು ಮೊದಲ ಲೆಕ್ಕವನ್ನು ನೋಡೋಣ: ಮರುಪಾವತಿ ಸಾಮರ್ಥ್ಯ

ಮರುಪಾವತಿಯ ಸಾಮರ್ಥ್ಯ ನಿಮ್ಮ ಒಟ್ಟು ಆದಾಯ ಮತ್ತು ವೆಚ್ಚವನ್ನು ಅವಲಂಬಿಸಿರುತ್ತದೆ. ಈಗ ನಿಮಗೆ ಮಾಸಿಕ ಆದಾಯ ರೂ. 20,000 ಬರುತ್ತದೆ ಎಂದು ತಿಳಿಯೋಣ ಹಾಗೂ ನಿಮ್ಮ ಮಾಸಿಕ ವೆಚ್ಚ ರೂ. 12,000 ಆಗಿದ್ದರೆ ನೀವು ತೆಗೆದುಕೊಳ್ಳುವ ಯಾವುದೇ ಸಾಲಕ್ಕೆ ರೂ. 8000 ಮರು ಪಾವತಿ ಮಾಡಬಹುದು. ಈ ಅಂಕಿಯನ್ನು ಅರ್ಹತಾ ಮೊಬಲಗಿನಲ್ಲಿ ಸಾಲದ ಅವಧಿಗೆ ವ್ಯತಿರಿಕ್ತವಾಗಿ ಲೆಕ್ಕ ಹಾಕಲಾಗುತ್ತದೆ. ನಿಜವಾಗಿಯೂ ನಿಮ್ಮ ಮರುಪಾವತಿಯ ಸಾಮರ್ಥ್ಯ ಹೆಚ್ಚಾದಷ್ಟೂ ನಿಮ್ಮ ಸಾಲದ ಅಧತೆ ಹೆಚ್ಚಾಗುತ್ತದೆ.

ಇದು ಅಷ್ಟು ಸುಲಭವೇ?

ಇಲ್ಲ. ಆದರೆ ಇದು ಮೂಲ. ಇತರೆ ಅಂಶಗಳೂ ಮರುಪಾವತಿ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಉದಾ: ನೀವು ನಿಮ್ಮದೇ ಸ್ವಂತ ಮನೆ ಖರೀದಿಸುತ್ತಿರುವುದರಿಂದ, ನೀವು ಪ್ರತೀ ತಿಂಗಳು ರೂ. 2000 ವನ್ನು ಬಾಡಿಗೆಯ ಮೇಲೆ ಉಳಿಸಲು ಸಾಧ್ಯವಾಗುತ್ತದೆ ಇದರಿಂದ ನಿಮ್ಮ ಮರುಪಾವತಿಯ ಸಾಮರ್ಥ್ಯ (ರೂ. 8000 ಪ್ಲಸ್ ರೂ. 2000) ಇದು ನಿಮ್ಮ ಸಾಲ ಪಡೆಯುವ ಮೊಬಲಗನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ಜೊತೆಗೆ, ಇದೇ ಆದಾಯಕ್ಕೆ, ಸಾಲದ ಅರ್ಹತೆ ದೀರ್ಘಾವಧಿ ಸಾಲ ಅವಧಿಗೆ ಹೆಚ್ಚಾಗುತ್ತದೆ ಏಕೆಂದರೆ ಮರುಪಾವತಿಯು ಇದೇ ಮೊಬಲಗಿಗೆ  ದೀರ್ಘಾವಧಿಯವರೆಗೆ ಹರಡುತ್ತದೆ.

ಆದಾಯ ಎಂದು ಏನನ್ನು ಪರಿಗಣಿಸಲಾಗುತ್ತದೆ?

ಆದಾಯ ಎಂದು ಏನನ್ನು ಪರಿಗಣಿಸಲಾಗುತ್ತದೆ? ಸಾಲಗಾರನ ಆದಾಯವನ್ನು ಲೆಕ್ಕಹಾಕಲು ಕೆಲವು ಮೂಲ ನಿಯಮಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ಕೆಳಗಿನವುಗಳನ್ನು ಆದಾಯದ ವರ್ಗ ಎಂದು ಪರಿಗಣಿಸಲಾಗುವುದಿಲ್ಲ.

  • ವೈದ್ಯಕೀಯ ಮರುಪಾವತಿ, ಸಾಧನೆಯ ಬೋನಸ್ ಅಥವಾ ಎಲ್ ಟಿ ಎ, ಏಕೆಂದರೆ ಇವು ಸ್ಥಿರ ಅವಧಿಯಲ್ಲಿ ಲಭ್ಯವಿರುವುದಿಲ್ಲ ಅಥವಾ ಸ್ಥಿರ ಮೊಬಲಗನ್ನು ಹೊಂದಿರುವುದಿಲ್ಲ
  • ಬಡ್ಡಿ ಆದಾಯ, ಇದು ಆದಾಯದ ನಿಯಮಿತ ಮೂಲ ಎಂದು ಸಿದ್ಧವಾಗುವವರೆಗೆ
  • ಕೆಲವೊಮ್ಮೆ, ಕೆಲವು ನಿರ್ದಿಷ್ಟ ಕಾರಣಗಳಿಗೆ.
  • ಮೌಲ್ಯೀಕರಿಸಲಾಗದ ಮೂಲಗಳಾದ ವೆಚ್ಚದ ವೌಚರ್ ಗಳು, ಬಾಡಿಗೆ ಆದಾಯ ಇತ್ಯಾದಿಗಳನ್ನು ಸ್ಥಿರ ಮತ್ತು ನಿರಂತರ ಎಂದು ಮೂಲದ ದಾಖಲಾತಿ ರುಜುವಾತುಪಡಿಸುವವರೆಗೆ ಇವುಗಳಿಂದ ಬರುವ ಆದಾಯ

ಸ್ವ-ಉದ್ಯೋಗಿ ವೃತ್ತಿಪರರಿಗೆ, ಕೆಲವು ದಾಖಲಾತಿಗಳು ಭಿನ್ನವಾಗಿರುತ್ತದೆ ಹಾಗೂ ಮಾನದಂಡಗಳು ಸಹ ಭಿನ್ನವಾಗಿರುತ್ತವೆ

ಆಸ್ತಿಯ ಜಂಟಿ ಮಾಲೀಕತ್ವದ ಸಂದರ್ಭದಲ್ಲಿ, ಅರ್ಜಿದಾರರು ಮತ್ತು ಸಹ ಅರ್ಜಿದಾರ ಇಬ್ಬರ ಆದಾಯಗಳನ್ನು ಒಟ್ಟಾಗಿ ಸೇರಿಸಿ ಮರುಪಾವತಿಯ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ

ಪ್ರಸ್ತುತ ಸಾಲಗಳು

ನೀವು ಪ್ರಸ್ತುತ ಯಾವುದೇ ಸಾಲ ಹೊಂದಿದ್ದರೆ, ಅವು ನಿಮ್ಮ ವಿತರಣಾ ಆದಾಯದಲ್ಲಿ (ಮೇಲಿನ ಉದಾಹರಣೆಯಲ್ಲಿ ರೂ. 8000) ನಿಮ್ಮ ಪ್ರಸ್ತುತ ಸಾಲಕ್ಕೆ ಮಾಸಿಕ ಕಂತು ಹಿಡಿಯುವುದರಿಂದ ಅದು ನಿಮ್ಮ ಮರುಪಾವತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀಋತ್ತದೆ. ಹೆಚ್ಚಾಗಿ, 6 ತಿಂಗಳಿಗಿಂತ ಕಡಿಮೆ ಅವಧಿಯ ಸಾಲವನ್ನು ಪರಿಗಣಿಸಲಾಗುವುದಿಲ್ಲ

ಅವಧಿ

ದೀರ್ಘಾವಧಿಗೆ ಸಾಲ ತೆಗೆದುಕೊಳ್ಳುವುದರಿಂದ ಅದು ನಿಮ್ಮ ಸಾಲ ಅರ್ಹತೆಯನ್ನು ಹೆಚ್ಚಿಸುವ ಕುರಿತು ತಿಳಿದಿರುವುದರಿಂದ, ನೀವು ಆ ಮಾರ್ಗದ ಮಿತಿಗಳನ್ನು ತಿಳಿಯುವುದೂ ಸಹ ಅಷ್ಟೇ ಮುಖ್ಯವಾಗಿದೆ

ಅರ್ಜಿಯ ಸಮಯದಲ್ಲಿ ನಿಮ್ಮ ವಯಸ್ಸಿನ ಆಧಾರದ ಮೇಲೆ ಸಾಲದ ಗರಿಷ್ಟ ಅವಧಿ ಲಭ್ಯವಾಗುತ್ತದೆ. ವಯಸ್ಸು ವೇತನದಾರ ಉದ್ಯೋಗಿಗಳಿಗೆ  58 ವರ್ಷ/ 60 ವರ್ಷ ಮೀರಬಾರದು (ನಿಮ್ಮ ಕಂಪನಿಯಲ್ಲಿ ನಿವೃತ್ತಿಯು ನಿರ್ಧರಿಸಲ್ಪಟ್ಟಿರುತ್ತದೆ) ಮತ್ತು ಸ್ವ ಉದ್ಯೋಗಿ ವ್ಯಕ್ತಿಗಳಿಗೆ 65 ಕ್ಕಿಂತ ಹೆಚ್ಚು ವರ್ಷ ಮೀರುವಂತಿಲ್ಲ.

ಇದನ್ನು ಮನದಲ್ಲಿಟ್ಟುಕೊಂಡು, ಗರಿಷ್ಟ ಸಂಭಾವ್ಯ ಅವಧಿಯನ್ನು ತೆಗೆದುಕೊಳ್ಳುವುದು ಗರಿಷ್ಟ ಮೊಬಲಗಿನ ಅರ್ಹತೆಯನ್ನು ಖಚಿತಪಡಿಸುತ್ತದೆ

ನಾವು ಮಾಸಿಕ ಕಂತಿನ ಲೆಕ್ಕಾಚಾರದ ಸಾಧನವನ್ನು ಹೊಂದಿದ್ದು,ಇದು ನಿಮ್ಮ ಮಾಸಿಕ ಮರುಪಾವತಿಯ ಆಯ್ಕೆಯ ಅಂದಾಜು ಅಂಕಿಅಂಶವನ್ನು ನೀಡುತ್ತದೆ.

ನಿಖರ ಮೊಬಲಗಿಗೆ, ದಯವಿಟ್ಟು ನಮಗೆ ಕರೆಮಾಡಿ ಅಥವಾ ನಮ್ಮನ್ನು ಸಂಪರ್ಕಿಸಲು ಡ್ರಾಪ್ ಮಾಡಿ, ಹಾಗೂ ನಾವು ನಿಮಗೆ ವಿವರಗಳನ್ನು ನೀಡಲು ಹರ್ಷಿಸುತ್ತೇವೆ

Leave a Reply

Your email address will not be published. Required fields are marked *

*
*
Website