ನೀವು ಅಂತಿಮವಾಗಿ ಚೆಕ್ ಸ್ವೀಕರಿಸುವುದು ಉತ್ತಮ ಭಾಗವಾಗಿದೆ. ಆಸ್ತಿಯು ಕಾನೂನುಬದ್ಧವಾಗಿ ಸ್ಪಷ್ಟವಾಗಿದ್ದು, ನೀವು ಮಾಲೀಕತ್ವದ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಹಸ್ತಾಂತರಿಸಿದ ನಂತರ ಇದನ್ನು ನಿರ್ಧರಿಸಲಾಗುತ್ತದೆ. ಈ ಹಂತದಲ್ಲಿ, ಆಸ್ತಿ ವೆಚ್ಚದೆಡೆಗೆ ನಿಮ್ಮ ಕೊಡುಗೆಯಾಗಿ ನೀವು ಪಾವತಿಸುವ ಮೊಬಲಗಿನ ರುಜುವಾತನ್ನೂ ಸಹ ನೀಡುವುದು ಮುಖ್ಯವಾಗಿರುತ್ತದೆ

ಚೆಕ್ ಅನ್ನು ಮರುಮಾರಾಟದಾರ, ಅಥವಾ ಬಿಲ್ಡರ್, ಸಮಾಜ ಅಥವಾ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ನೀಡಲಾಗುತ್ತದೆ. ನಿರ್ದಿಷ್ಟ ರುಜುವಾತನ್ನು ನೀಡುವವರೆಗೂ, ಕೇವಲ ಅನಿರೀಕ್ಷಿತ ಸಂದರ್ಭಗಳ ಹೊರತಾಗಿ, ಚೆಕ್ ಅನ್ನು ನೇರವಾಗಿ ನಿಮಗೆ ನೀಡಲಾಗುತ್ತದೆ

ಸಾಮಾನ್ಯವಾಗಿ, ಸಾಲವನ್ನು ಆಸ್ತಿ ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ನೀಡಲಾಗುತ್ತದೆ. ಎಂದರೆ ವಿತರಣೆಯನ್ನು ಪೂರ್ಣ (ಮರುಮಾರಾಟಾ ಫ್ಲ್ಯಾಟ್ ಆದಲ್ಲಿ) ಅಥವಾ ಆಂಶಿಕ (ಹೊಸದಾಗಿ ನಿರ್ಮಾಣವಾಗುತ್ತಿದ್ದರೆ ಅಥವಾ ಸ್ವಯಂನಿರ್ಮಾಣ ಮಾಡುತ್ತಿದ್ದರೆ) ನೀಡಲಾಗುವುದು. ಪ್ರತಿಯೊಂದು ಆಯ್ಕೆಯೂ ವಿಭಿನ್ನ ವಿತರಣಾ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಆಂಶಿಕ ವಿತರಣೆ

ಸಾಲವನ್ನು ಆಂಶಿಕವಾಗಿ ವಿತರಿಸಿದಲ್ಲಿ, ಮಾಸಿಕ ಕಂತು ತಕ್ಷಣವೇ ಆರಂಭವಾಗುವುದಿಲ್ಲ. ಇದು ಸಾಮಾನ್ಯವಾಗಿ ಪೂರ್ವ ಮಾಸಿಕ ಕಂತಾಗಿ ಆರಂಭವಾಗುತ್ತದೆ. ಇಸು ವಿತರಿಸಲಾದ ಮೊಬಲಗಿನ ಸರಳ ಬಡ್ಡಿ ಮಾತ್ರವಾಗಿರುತ್ತದೆ. ಈ ಪ್ರಕ್ರಿಯೆ ಪೂರ್ಣ ಮೊಬಲಗನ್ನು ನೀಡುವವರೆಗೆ ಮುಂದುವರೆಸಲಾಗುತ್ತದೆ. ನೀವು, ಈ ಹಂತದಲ್ಲಿ, ಎಲ್ಲಾ ಪೂರ್ವ ಮಾಸಿಕ ಕಂತು ಚೆಕ್ ಗಳನ್ನು ಅದನ್ನು ಪ್ರಸ್ತುತ ಪಡಿಸಿದಾಗ ಮಾನ್ಯವಾಗಿದೆ ಎಂದು ಖಚಿತಪಡಿಸಬೇಕು.

ಪೂರ್ಣ ವಿತರಣೆ

ಮರುಮಾರಾಟ ಆಸ್ತಿಯಾದಲ್ಲಿ, ಅಥವಾ ವಾಸಕ್ಕೆ ಸಿದ್ಧವಾದ ಆಸ್ತಿಯಾದಲ್ಲಿ, ಸಂಪೂರ್ಣ ಮೊಬಲಗನ್ನು ಬಿಲ್ಡರ್ ಅಥವಾ ಮಾರಾಟದಾರನ ಹೆಸರಿನಲ್ಲಿ ನೀಡಲಾಗುತ್ತದೆ. ನಿಮ್ಮ ಬಿಲ್ಡರ್ ಮತ್ತು ಮಾರಾಟದಾರನ ನಡುವೆ ನಡೆಯುವ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ವಿತರಣೆ ಪೂರ್ಣಗೊಂಡ ನಂತರ, ನೀವು ನಮಗೆ ಎಲ್ಲಾ ಮೂಲ ದಾಖಲಾತಿಗಳನ್ನು ಹಸ್ತಾಂತರಿಸಬೇಕು ದಾಖಲಾತಿಯ ವರ್ಗಾವಣೆ ನಂತರದ ಪ್ರಕ್ರಿಯೆ ಪೂರ್ಣವಾಗುತ್ತದೆ. ನೀವು ಪಾವತಿಯ ರಸೀದಿಯನ್ನು ಸಹ ಹಸ್ತಾಂತರಿಸಬೇಕು. ಇದು ನಿಮ್ಮ ಪೈಲ್ ನಲ್ಲಿ ಸಾಲ ದಾಖಲಾತಿಯ ಭಾಗವಾಗಿದೆ.

ನಿಮ್ಮ ಆಸ್ತಿ ಹೌಸಿಂಗ್ ಸೊಸೈಟಿಯ ಭಾಗವಾಗಿದ್ದಲ್ಲಿ, ನೀವು ಸೊಸೈಟಿಗೆ ಫ್ಲ್ಯಾಟ್ ಅನ್ನು ನಿಮ್ಮ ಹೆಸರಿಗೆ ವರ್ಗಾಯಿಸುವಂತೆ ಕೇಳಬೇಕು, ಮತ್ತು ನಿಮಗೆ ನಿಮ್ಮ ಹೆಸರಿನಲ್ಲಿ ಪ್ರಮಾಣಪತ್ರ, ಮತ್ತು ಅವರ ಪುಸ್ತಕದಲ್ಲಿ ಮಾಲೀಕತ್ವ ವರ್ಗಾವಣೆಯನ್ನು ಕುರಿತು ದಾಖಲಿಸುವಂತೆ ತಿಳಿಸಬೇಕು.

ಈ ವರ್ಗಾವಣೆ ವಿನಿಮಯ ಪ್ರಮಾಣಪತ್ರ ಸಾಲ ದಾಖಲಾತಿಯ ಒಂದು ಭಾಗವಾಗಿದ್ದು, ಅದನ್ನು ನಮ್ಮೊಂದಿಗೆ ಫೈಲ್ ಮಾಡಲು ಹಸ್ತಾಂತರಿಸುವ ಅಗತ್ಯವಿದೆ.

ಮರುಪಾವತಿ ಹೇಗೆ ಮಾಡುವುದು

ಸಾಮಾನ್ಯವಾಗಿ, ನಿಮಗೆ ಸಾಲ ಮಂಜೂರಾದ ಮೊಬಲಗು ಮತ್ತು ಅದರ ಯೋಜನೆಯ ಆಧಾರದ ಮೇಲೆ 12, 24 ಅಥವಾ 36 ತಿಂಗಳಿನ ಅವಧಿಗೆ ಪೋಸ್ಟ್ ಡೇಟೆಡ್ ಚೆಕ್ (ಪಿಡಿಸಿ) ನೀಡುವಂತೆ ಕೇಳಲಾಗುವುದು.

ನಿಮ್ಮ ಕಂತನ್ನು ನಿಮ್ಮ ವೇತನದಿಂದ ನೇರವಾಗಿ ಹಿಡಿಯುವುದಾದರೆ, ನೀವು ಈ ವ್ಯವಸ್ಥೆಯ ಕುರಿತು ನಿಮ್ಮ ಮಾಲೀಕರಿಂದ ಖಚಿತಪಡಿಸುವ ಪತ್ರವನ್ನು ನೀಡಬೇಕು ಮತ್ತು ಮೊಬಲಗನ್ನು ನಮಗೆ ನೇರವಾಗಿ ವರ್ಗಾಯಿಸಬೇಕು.

ನಿಮ್ಮ ಬ್ಯಾಂಕ್ ನಿಮ್ಮ ಸಾಲದ ಖಾತೆಗೆ ನಿಮ್ಮ ವೇತನ ಖಾತೆಯಿಂದ ನೇರವಾಗಿ ನಮಗೆ ವರ್ಗಾಯಿಸುವ ಸೌಲಭ್ಯವನ್ನು ಸಹ ನೀಡುತ್ತದೆ.

ಹಾಗೂ, ನೀವು ನಿಮ್ಮ ಮಾಸಿಕ ಕಂತನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ನಗದು ರೂಪದಲ್ಲಿಯೂ ಠೇವಣಿ ಮಾಡಬಹುದು.

ನೀವು ನಮ್ಮ ಯಾವುದೇ ಶಾಖೆಯಲ್ಲೂ ಪಾವತಿ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

*
*
Website