ನಿಮ್ಮ ಅರ್ಜಿಯನ್ನು ಒಮ್ಮೆ ಸಂಸ್ಕರಣೆಗೆ ಒಳಪಡಿಸಿದ ನಂತರ ಮತ್ತು ನೀವು ಮನವಿ ಮಾಡಿದ ಸಾಲದ ಮೊಬಲಗು ಹಾಗೂ ನಿಮ್ಮ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ, ನೀವು ಅರ್ಹರಾಗಿರುವ ಅಂತಿಮ ಸಾಲದ ಮೊಬಲಗನ್ನು ನಿಮಗೆ ತಿಳಿಸಲಾಗುತ್ತದೆ. ನಂತರ ನಿಮಗೆ ಮಂಜೂರಾತಿ ನೀಡುವ ಅಡಿಯಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ವಿವರಿಸುವ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ. ಈ ನಿಯಮ ಮತ್ತು ನಿಬಂಧನೆಗಳನ್ನು ಸಾಲದ ಮೊಬಲಗು ವಿತರಿಸುವ ಮೊದಲು ಪೂರ್ಣಗೊಳಿಸಬೇಕಾಗುತ್ತದೆ.

ನೀಡಿಕೆ ಪತ್ರ

ನೀಡಿಕೆ ಪತ್ರ ಸಾಲದ ಮೊಬಲಗು, ಬಡ್ಡಿದರ, ಅವಧಿ, ಮರುಪಾವತಿಯ ವಿಧಾನ ಮತ್ತು ಇತರೆ ವಿವರಗಳು ಮತ್ತು ವಿಶೇಷ ನಿಬಂಧನೆಗಳನ್ನು ಹೊಂದಿರುತ್ತದೆ

ನಂತರ, ಸ್ವೀಕೃತಿ ಪತ್ರವನ್ನು ನಮ್ಮಿಂದ ನೀಡಲಾಗುವ ಸ್ಟ್ಯಾಂಡರ್ಡ್ ಮಾದರಿಯಲ್ಲಿ ನಿಮಗೆ ನೀಡಲಾಗುತ್ತದೆ, ಇದರೊಂದಿಗೆ ಮಂಜೂರಾತಿ ಪತ್ರದಲ್ಲಿರುವ ನಿಯಮ ಮತ್ತು ನಿಬಂಧನೆಗಳ ದಾಖಲಾತಿಯನ್ನು ನೀಡಲಾಗುತ್ತದೆ.  ಇದು ಕೇವಲ ನಿಮ್ಮ ಸಾಲ ಪ್ರಸ್ತಾವನೆಯ ಆರ್ಥಿಕ ಅನುಮೋದನೆ ಮಾತ್ರ. ಸಾಲ ವಿತರಣೆಯನ್ನು ನೀಡಿಕೆಯನ್ನು ಸ್ವೀಕರಿಸಿದ ನಂತರ ಮತ್ತು ಅಡಮಾನ ಕಾನೂನುಬದ್ಧವಾಗಿ ಮತ್ತು ತಾಂತ್ರಿಕವಾಗಿ ಸ್ಪಷ್ಟವಾಗಿ ಜಾರಿಯಾದಾಗ ಮಾತ್ರ ನೀಡಲಾಗುತ್ತದೆ.

ಕಾನೂನುಬದ್ಧ ದಾಖಲಾತಿಗಳ ಸಲ್ಲಿಕೆ

ಒಮ್ಮೆ ನೀವು ನೀಡಿಕೆಯನ್ನು ಸ್ವೀಕರಿಸಿದ ನಂತರ, ನೀವು ಆಸ್ತಿಯ ಮೂಲ ದಾಖಲಾತಿಗಳನ್ನು ಹಸ್ತಾಂತರಿಸಬೇಕು, ಇದರಿಂದ ಸಾಲ ಪೂರ್ಣ ಹಿಂದಿರುಗಿಸುವವರೆಗೂ ಅದನ್ನು ಭದ್ರತೆಯಾಗಿ ಇಡಲಾಗುತ್ತದೆ

ಒಪ್ಪಂದಕ್ಕೆ ಸಹಿ ಮಾಡುವುದು

ಒಪ್ಪಂದ ಮತ್ತು ಇತರೆ ದಾಖಲಾತಿಗಳನ್ನು ಬಾಕಿ ಪ್ರಕ್ರಿಯೆಗಳ ಪ್ರಕಾರ ಸಹಿ ಮಾಡುವ ಅಗತ್ಯವಿದೆ.

Leave a Reply

Your email address will not be published. Required fields are marked *

*
*
Website