ಜಿಐಸಿ ಹೌಸಿಂಗ್ ಫೈನಾನ್ಸ್ ಲಿ., (ಜಿ ಐ ಸಿ ಹೆಚ್ ಎಫ್ ಎಲ್) ತನ್ನ ಗ್ರಾಹಕರೊಂದಿಗೆ ಉದ್ದಿಮೆ ವ್ಯವಹಾರವನ್ನು ಪಾರದರ್ಶಕತೆಯಿಂದ ನಿರ್ವಹಿಸಲು ಕೆಲವು ಸಂಹಿತೆಗಳನ್ನು ಅಳವಡಿಸಿಕೊಂಡಿದೆ.

 • ಉದ್ದೇಶಗಳು:
  1. ಗ್ರಾಹಕರೊಂದಿಗಿನ ವ್ಯವಹಾರದಲ್ಲಿ ಕನಿಷ್ಟ ಮಾನದಂಡವನ್ನು ನಿರ್ವಹಿಸಲು ಉತ್ತಮ ಮತ್ತು ಪ್ರಾಮಾಣಿಕ ಅಭ್ಯಾಸಗಳನ್ನು ಉತ್ತೇಜಿಸಲು
  2. ಗ್ರಾಹಕರು ಸೇವೆಗಳಲ್ಲಿ ಸಮರ್ಪಕ ನಿರೀಕ್ಷೆಯನ್ನು ಅರಿತುಕೊಂಡು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪಾರದರ್ಶಕತೆಯನ್ನು ಹೆಚ್ಚಿಸಲು;
  3. ಅಧಿಕ ಕಾರ್ಯನಿರ್ವಹಣೆಯ ಮಾನದಂಡವನ್ನು ಸಾಧಿಸಲು ಸ್ಪರ್ಧೆಯ ಮೂಲಕ ಮಾರುಕಟ್ಟೆ ಬಲವನ್ನು ಪ್ರೋತ್ಸಾಹಿಸಲು;
  4. ಗ್ರಾಹಕರು ಮತ್ತು ಜಿ ಐ ಸಿ ಹೆಚ್ ಎಫ್ ಎಲ್ ನಡುವೆ ಪ್ರಾಮಾಣಿಕ ಮತ್ತು ಉತ್ತಮ ಸಂಬಂಧ ಉತ್ತೇಜಿಸಲು; ಹಾಗೂ ಗೃಹ ಸಾಲ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ವೃದ್ಧಿಸಲು
  • ಸಂಹಿತೆಯ ಅಳವಡಿಕೆ: ಈ ಸಂಹಿತೆಯನ್ನು ಜಿ ಐ ಸಿ ಹೆಚ್ ಎಫ್ ಎಲ್ ನ ಎಲ್ಲಾ ಉದ್ಯೋಗಿಗಳು ಮತ್ತು ಅದರ ಉದ್ದಿಮೆಯ ಅವಧಿಯಲ್ಲಿ ಪ್ರತಿನಿಧಿಸಲು ಅಧಿಕಾರವಿರುವ ಇತರೆ ವ್ಯಕ್ತಿಗಳಿಗೆ ಅನ್ವಯಿಸಲಾಗುತ್ತದೆ.
 • ಬದ್ಧತೆಗಳು: :
  ಜಿ ಐ ಸಿ ಹೆಚ್ ಎಫ್ ಎಲ್ ಎಲ್ಲಾ ವಹಿವಾಟುಗಳಲ್ಲಿ ಸಮಗ್ರತೆ ಹಾಗೂ ಪಾರದರ್ಶಕತೆಯ ನೈತಿಕ ತತ್ವದ ಆಧಾರದಲ್ಲಿ ಗೃಹ ಸಾಲ ಉದ್ದಿಮೆಯಲ್ಲಿನ ಉನ್ನತ ಅಭ್ಯಾಸಗಳನ್ನು ಸಂಧಿಸಲು ಪ್ರಾಮಾಣಿಕವಾಗಿ ಮತ್ತು ಸಕಾಲಿಕವಾಗಿ ಈ ಸಂಹಿತೆಗೆ ಬದ್ಧವಾಗಿದೆ.

  1. ಬಡ್ಡಿ ಮತ್ತು ಸೇವಾ ಶುಲ್ಕಗಳನ್ನು ಒಳಗೊಂಡಂತೆ ಅದರ ನಿಯಮ ಮತ್ತು ನಿಬಂಧನೆಗಳೊಂದಿಗೆ ಉತ್ಪನ್ನ ಮತ್ತು ಸೇವೆಗಳ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತದೆ.
  2. ಗ್ರಾಹಕರಿಗೆ ಲಭ್ಯವಿರುವ ಸೌಲಭ್ಯಗಳು

  ಜಿ ಐ ಸಿ ಹೆಚ್ ಎಫ್ ಎಲ್ ಯಾವುದೇ ತಪ್ಪಾದಲ್ಲಿ, ಅದನ್ನು ಶೀಘ್ರವಾಗಿ ಮತ್ತು ಅನುನಯದಿಂದ ಪರಿಹರಿಸುತ್ತದೆ ಹಾಗೂ ಈ ಸಂಹಿತೆಯ ಉದ್ದೇಶಗಳ ಮಾರ್ಗದಲ್ಲಿ ಗ್ರಾಹಕರ ದೂರುಗಳನ್ನು ನಿರ್ವಹಿಸುತ್ತದೆ.

  ಜಿ ಐ ಸಿ ಹೆಚ್ ಎಫ್ ಎಲ್ ಗ್ರಾಹಕರ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಖಾಸಗಿ ಮತ್ತು ಗೌಪ್ಯವೆಂದು ಪರಿಗಣಿಸುತ್ತದೆ ಹಾಗೂ ಕಾನೂನು ಅಥವಾ ನಿಬಂಧಕರು ಅಥವಾ ಕ್ರೆಡಿಟ್ ಏಜೆನ್ಸಿ ಅಥವಾ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ  ಗ್ರಾಹಕನಿಂದ ಅನುಮತಿಸಲ್ಪಟ್ಟಿರುವುದು ಒಳಗೊಂಡಂತೆ ಸರ್ಕಾರೀ ಪ್ರಾಧಿಕಾರಗಳಿಗೆ ಅಗತ್ಯವಿಲ್ಲದ ಹೊರತು ಮೂರನೆಯ ವ್ಯಕ್ತಿಗೆ ವಿನಿಮಯ ಮಾಡುವುದಿಲ್ಲ.

  ಜಿ ಐ ಸಿ ಹೆಚ್ ಎಫ್ ಎಲ್ ಕೋರಿಕೆಯ ಮೇರೆಗೆ, ಪ್ರಸ್ತುತ ಸಾಲಗಾರನಿಗೆ ಮತ್ತು ಉದ್ದಿಮೆ ವಹಿವಾಟಿಗೆ ತೊಡಗುವ ಬದ್ಧತೆಗೆ ಮೊದಲು ಹೊಸ ಗ್ರಾಹಕನಿಗೆ ಈ ಸಂಹಿತೆಯ ಪ್ರತಿಯನ್ನು ನೀಡುತ್ತದೆ.

  ಜಿ ಐ ಸಿ ಹೆಚ್ ಎಫ್ ಎಲ್ ತನ್ನ ಗ್ರಾಹಕರನ್ನು ವಯಸ್ಸು, ಕುಲ, ಜಾತಿ, ಲಿಂಗ, ವೈವಾಹಿಕ ಸ್ಥಿತಿ, ಧರ್ಮ ಅಥವಾ ನ್ಯೂನತೆಯ ಆಧಾರದ ಮೇಲೆ ಭಿನ್ನತೆಯನ್ನು ತೋರುವುದಿಲ್ಲ. ಆದರೆ, ಸಾಲ ಉತ್ಪನ್ನದಲ್ಲಿ ಸೂಚಿಸಿರುವಂತೆ ಯಾವುದೇ ನಿರ್ಬಂಧನೆಗಳಿದ್ದಲ್ಲಿ, ಅದು ಅನ್ವಯವಾಗುತ್ತದೆ.

 • ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆ:
  ಜಿ ಐ ಸಿ ಹೆಚ್ ಎಫ್ ಎಲ್ ಬಡ್ಡಿ ದರ, ಸಾಮಾನ್ಯ ಶುಲ್ಕಗಳು ಮತ್ತು ದಂಡಗಳ ಕುರಿತಾದ ಮಾಹಿತಿಯನ್ನು ಕೆಳಗಿನವುಗಳ ಮೂಲಕ ನೀಡುತ್ತದೆ:a.    ಶಾಖೆಗಳಲ್ಲಿ ಸೂಚನೆಯನ್ನು ಹಾಕುವ ಮೂಲಕ
  b.    ಸುಂಕ ನಿಗದಿ ನೀಡುವ ಮೂಲಕ
 • ಜಾಹೀರಾತು, ಮಾರುಕಟ್ಟೆ, ಮತ್ತು ಮಾರಾಟ
  ಜಿ ಐ ಸಿ ಹೆಚ್ ಎಫ್ ಎಲ್ ಎಲ್ಲಾ ಜಾಹೀರಾತು ಮತ್ತು ಪ್ರಚಾರ ಪದಾರ್ಥಗಳು ಸ್ಪಷ್ಟವಾಗಿದ್ದು, ಯಾವುದೇ ರೀತಿಯಲ್ಲಿ ತಪ್ಪು ದಾರಿಗೆ ಎಳೆಯುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ಪ್ರಾಮಾಣಿಕ ಅಭ್ಯಾಸ ಸಂಹಿತೆ ಗ್ರಾಹಕರಿಗೆ ಉತ್ಪನ್ನವನ್ನು ವೈಯಕ್ತಿಕವಾಗಿ ಮಾರಾಟ ಮಾಡಲು ಸಂಧಿಸುವ ಕಂಪನಿಯ ಮಾರಾಟ ಸಹಾಯಕರು/ಪ್ರತಿನಿಧಿಗಳಿಗೆ ಸಹ ಅನ್ವಯವಾಗುತ್ತದೆ
 • ಕ್ರೆಡಿಟ್ ಪರಾಮರ್ಶೆಯ ಏಜೆನ್ಸಿಗಳು:  ಜಿ ಐ ಸಿ ಹೆಚ್ ಎಫ್ ಎಲ್ ಕ್ರೆಡಿಟ್ ಪರಾಮರ್ಶೆ ಏಜೆನ್ಸಿಗಳಿಗೆ ಗ್ರಾಹಕನ ಕುರಿತು ಮಾಹಿತಿ ನೀಡುತ್ತದೆ:
  a. ಖಾತೆ ತೆರೆಯುವಿಕೆ
  b. ಗ್ರಾಹಕ ಆತ/ಆಕೆಯ ಪಾವತಿಗಳಲ್ಲಿ ಹಿಂದೆ ಬಿದ್ದಾಗ
  c. ಬಾಕಿ ವಸೂಲಾತಿಗಾಗಿ ಗ್ರಾಹಕನ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ
  d. ಗ್ರಾಹಕರ ವಿರುದ್ಧ ಕಾನೂನು ಪ್ರಕರಣದ ಮೂಲಕ ಸಾಲ ನಿರ್ಧರಣೆ ಮಾಡಬಹುದು
  ಜಿ ಐ ಸಿ ಹೆಚ್ ಎಫ್ ಎಲ್ ಕಾನೂನಿಗೆ ಅಗತ್ಯವಿದ್ದಲ್ಲಿ ಅಥವಾ ಗ್ರಾಹಕ ಆತ/ಆಕೆಯ ಅನುಮತಿಯನ್ನು ನೀಡಿದರೆ ಗ್ರಾಹಕನ ಖಾತೆಯ ಕುರಿತಾದ ಇತರ ಮಾಹಿತಿಯನ್ನು ಕ್ರೆಡಿಟ್ ರೆಫರೆನ್ಸ್ ಏಜೆನ್ಸೀಸ್ ಗೆ ನೀಡಬಹುದಾಗಿದೆ.
 • ಬಾಕಿ ಸಂಗ್ರಹ:
  ಸಾಲವನ್ನು ನೀಡುವಾಗ, ಜಿ ಐ ಸಿ ಹೆಚ್ ಎಫ್ ಎಲ್ ಗ್ರಾಹಕನಿಗೆ ಮೊಬಲಗು, ಅವಧಿ ಮತ್ತು ಮರುಪಾವತಿಯ ಕಾಲಾವಧಿಯ ಮಾರ್ಗಗಳ ಪ್ರಕ್ರಿಯೆಯ ಕುರಿತು ವಿವರಿಸುತ್ತದೆ. ಆದರೆ ಗ್ರಾಹಕ ನಿಗದಿತ ಅವಧಿಗೆ ಮರುಪಾವತಿ ಮಾಡಲು ಬದ್ಧನಾಗದಿದ್ದಲ್ಲಿ, ಬಾಕಿ ವಸೂಲಾತಿಗಾಗಿ ಭೂಮಿಗೆ ಸಂಬಂಧಿಸಿದ ಕಾನೂನಿನ ಪ್ರಕಾರ ನಿರ್ದಿಷ್ಟ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಪ್ರಕ್ರಿಯೆಯು ಗ್ರಾಹಕನಿಗೆ ಸೂಚನೆ ಕಳುಹಿಸುವುದು ಅಥವಾ ಆತ/ಆಕೆಯನ್ನು ವೈಯಕ್ತಿಕ ಭೇಟಿ ಮಾಡುವುದು ಮತ್ತು/ಅಥವಾ ಭದ್ರತೆಯ ಸ್ವಾಧೀನತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಜಿ ಐ ಸಿ ಹೆಚ್ ಎಫ್ ಎಲ್ ಸಿಬ್ಬಂದಿ ಅಥವಾ ಬಾಕಿ ಅಥವಾ/ಮತ್ತು ಭದ್ರತೆ ಮರುಸ್ವಾಧೀನತೆ ಸಂಗ್ರಹಕ್ಕಾಗಿ ಕಂಪನಿಯನ್ನು ಪ್ರತಿನಿಧಿಸುವ ಹಕ್ಕು ಹೊಂದಿರುವ ಯಾವುದೇ ವ್ಯಕ್ತಿ ಜಿ ಐ ಸಿ ಹೆಚ್ ಎಫ್ ಎಲ್ ನಿಂದ ನೀಡಲಾದ ಪ್ರಾಧಿಕಾರ ಪತ್ರವನ್ನು ತೋರಿಸಿ ಆತ/ಆಕೆಯನ್ನು ಗುರುತಿಸಿಕೊಳ್ಳಬೇಕು ಮತ್ತು ಮನವಿಯ ಮೇರೆಗೆ, ಜಿ ಐ ಸಿ ಹೆಚ್ ಎಫ್ ಎಲ್ ಅಥವಾ ಜಿ ಐ ಸಿ ಹೆಚ್ ಎಫ್ ಎಲ್ ಪ್ರಾಧಿಕಾರದ ಅಡಿಯಲ್ಲಿ ನೀಡಲಾದ ಆತ/ಆಕೆಯ ಗುರುತುಪತ್ರವನ್ನು ಪ್ರದರ್ಶಿಸಬೇಕು. ಕಂಪನಿ ಗ್ರಾಹಕನಿಗೆ ಬಾಕಿಯ ಕುರಿತಾಗಿ ಎಲ್ಲಾ ಮಾಹಿತಿಯನ್ನೂ ನೀಡುತ್ತದೆ. ಪರಸ್ಪರ ಒಪ್ಪಿಗೆಯ ಮೇರೆಗೆ ಮತ್ತು ಕ್ರಮಬದ್ಧ ವಿಧಾನದಲ್ಲಿ ಬಾಕಿಗೆ ಸಂಬಂಧಿಸಿದ ಯಾವುದೇ ಸಂಘರ್ಷ ಅಥವಾ ಭಿನ್ನತೆಗಳನ್ನು ಪರಿಹರಿಸಿಕೊಳ್ಳಲು ಎಲ್ಲಾ ಸಹಕಾರವನ್ನೂ ನೀಡಲಾಗುತ್ತದೆ. ಬಾಕಿ ಸಂಗ್ರಹಕ್ಕಾಗಿ ಗ್ರಾಹಕನ ಸ್ಥಳಕ್ಕೆ ಭೇಟಿ ನೀಡುವಾಗ, ಶಿಸ್ತು ಮತ್ತು ಪ್ರತಿಷ್ಠೆಯನ್ನು ನಿರ್ವಹಿಸಬೇಕು.
 • ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆ ವೈ ಸಿ) ಮಾರ್ಗದರ್ಶನಗಳು:
  ಜಿ ಐ ಸಿ ಹೆಚ್ ಎಫ್ ಎಲ್ ತನ್ನ ಗ್ರಾಹಕರಿಗೆ ಕೆ ವೈ ಸಿ ಮಾರ್ಗದರ್ಶನದ ಅಗತ್ಯತೆಗಳ ಕುರಿತು ವಿವರಿಸುತ್ತದೆ ಹಾಗೂ ಅವರಿಗೆ ಸಾಲ ಮಂಜೂರಾತಿ, ಖಾತೆ ತೆರೆಯುವಿಕೆ ಮತ್ತು ಕಾರ್ಯನಿರ್ವಹಣೆಗೆ ಮೊದಲು ಗ್ರಾಹಕರ ಗುರುತು ಸ್ಥಾಪನೆಗಾಗಿ ದಾಖಲಾತಿಯ ಅಗತ್ಯತೆಯ ಕುರಿತು ವಿವರಿಸುತ್ತದೆ.ಜಿ ಐ ಸಿ ಹೆಚ್ ಎಫ್ ಎಲ್ ಕಂಪನಿಯ ಕೆ ವೈ ಸಿ, ವಂಚನೆ ವಿರೋಧಿ ಅಥವಾ ಇತರೆ ಯಾವುದೇ ಕಾನೂನು ಅಗತ್ಯತೆಗಳೊಂದಿಗೆ ಹೊಂದಿಸಲು ಮಾತ್ರ ಇಂತಹ ಮಾಹಿತಿಯನ್ನು ಪಡೆಯುತ್ತದೆ. ಯಾವುದೇ ಹೆಚ್ಚುವರಿ ಮಾಹಿತಿಯನ್ನು ಕೇಳಿದಲ್ಲಿ, ಅದನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ ಹಾಗೂ ಇಂತಹ ಹೆಚ್ಚುವರಿ ಮಾಹಿತಿಯನ್ನು ಪಡೆಯುವ ಉದ್ದೇಶವನ್ನು ವಿವರಿಸಲಾಗುತ್ತದೆ.
 • ಠೇವಣಿ ಖಾತೆಗಳು:
  ಜಿ ಐ ಸಿ ಹೆಚ್ ಎಫ್ ಎಪ್ ತನ್ನ ವಿವಿಧ ಠೇವಣಿ ಯೋಜನೆಗಳಾದ ಬಡ್ಡಿದರ, ಬಡ್ಡಿ ಅನ್ವಯವಾಗುವ ವಿಧಾನ, ಠೇವಣಿಯ ಅವಧಿ, ಅಕಾಲಿಕ ಹಿಂದೆಗೆತ, ನವೀಕರಣ, ಠೇವಣಿಯ ವಿರುದ್ಧ ಸಾಲ, ನಾಮನಿರ್ದೇಶನ ಸೌಲಭ್ಯ ಇತ್ಯಾದಿಗಳ ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತದೆ.
 • ಸಾಲಗಳು:ಜಿ ಐ ಸಿ ಹೆಚ್ ಎಫ್ ಎಲ್ ನಿಂದ ಸಾಲ ಮರುಪಾವತಿ ಸಾಮರ್ಥ್ಯ ಅಳೆಯುವಿಕೆ: ಜಿ ಐ ಸಿ ಹೆಚ್ ಎಫ್ ಎಲ್ ಗ್ರಾಹಕನಿಗೆ ಸಾಲ ನೀಡಲು ಸಾಧ್ಯವಾಗದಿದ್ದಲ್ಲಿ, ಅದು ತಿರಸ್ಕರಿಸಿದ್ದಕ್ಕಾಗಿ ಕಾರಣ(ಗಳು)ವನ್ನು ಲಿಖಿತ ರೂಪದಲ್ಲಿ ಗ್ರಾಹಕನಿಗೆ ಸಂವಹಿಸುತ್ತದೆ. ಗ್ರಾಹಕ ಜಿ ಐ ಸಿ ಹೆಚ್ ಎಫ್ ಎಲ್ ಆತ/ಅಕೆಗೆ ಹೊಣೆಗಾರಿಕೆಯಾಗಿ ಇತರೆ ಭದ್ರತಾ ಖಾತರಿಯನ್ನು ಸ್ವೀಕರಿಸಲು ಬಯಸಿದರೆ, ಕಂಪನಿಯು ಖಾತರಿ ನೀಡುವ ವ್ಯಕ್ತಿ ಅಥವಾ ಇತರ ಭದ್ರತೆಗೆ, ಅಥವಾ ಅವರ ಕಾನೂನು ಸಲಹೆಗಾರರಿಗೆ ಆತನ ಹಣಕಾಸಿನ ಕುರಿತಾದ ಗೌಪ್ಯ ಮಾಹಿತಿಯನ್ನು ನೀಡಬಹುದಾಗಿದೆ.
 • ಸಾಲ ಮತ್ತು ಅದರ ಸಂಸ್ಕರಣೆಗಾಗಿ ಅಪ್ಲಿಕೇಶನ್ ಗಳು:
  1. ಸಾಲ ಉತ್ಪನ್ನ ನೀಡುವ ಸಮಯದಲ್ಲಿ, ಜಿ ಐ ಸಿ ಹೆಚ್ ಎಫ್ ಎಲ್ ಅನ್ವಯವಾಗುವ ಬಡ್ಡಿದರ, ಶುಲ್ಕ/ದಂಡಗಳು, ಯಾವುದಾದರೂ ಇದ್ದಲ್ಲಿ, ಸಂಸ್ಕರಣೆಗಾಗಿ ಪಾವತಿ, ಪೂರ್ವ ಪಾವತಿ ಆಯ್ಕೆಗಳು ಮತ್ತು ಯಾವುದಾದರೂ ಇದ್ದಲ್ಲಿ, ಶುಲ್ಕಗಳು
  2. ಸಾಲ ಉತ್ಪನ್ನ ನೀಡುವ ಸಮಯದಲ್ಲಿ, ಜಿ ಐ ಸಿ ಹೆಚ್ ಎಫ್ ಎಲ್ ಅನ್ವಯವಾಗುವ ಬಡ್ಡಿದರ, ಶುಲ್ಕ/ದಂಡಗಳು, ಯಾವುದಾದರೂ ಇದ್ದಲ್ಲಿ, ಸಂಸ್ಕರಣೆಗಾಗಿ ಪಾವತಿ, ಪೂರ್ವ ಪಾವತಿ ಆಯ್ಕೆಗಳು ಮತ್ತು ಯಾವುದಾದರೂ ಇದ್ದಲ್ಲಿ, ಶುಲ್ಕಗಳು ಹಾಗೂ ಸಾಲಗಾರನ ಬಡ್ಡಿಯ ಮೇಲೆ ಪರಿಣಾಮ ಬೀರುವ ಇತರೆ ಯಾವುದೇ ವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ.
  3. ಸಾಲ ಅಪ್ಲಿಕೇಶನ್ ಸಂಸ್ಕರಣೆಗೆ ಅಗತ್ಯವಾದ ಎಲ್ಲಾ ವಿವರಗಳನ್ನೂ ಅಪ್ಲಿಕೇಶನ್ ಸಮಯದಲ್ಲಿ ಜಿ ಐ ಸಿ ಹೆಚ್ ಎಫ್ ಎಲ್ ಗೆ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದಲ್ಲಿ, ಜಿ ಐ ಸಿ ಹೆಚ್ ಎಫ್ ಎಲ್ ಗ್ರಾಹಕನನ್ನು ಸಂಪರ್ಕಿಸಬಹುದಾಗಿದೆ.
  4. ಜಿ ಐ ಸಿ ಹೆಚ್ ಎಫ್ ಎಲ್ ಅನ್ವಯವಾಗುವ ನಿಯಮ ಮತ್ತು ನಿಬಂಧನೆಯೊಂದಿಗೆ ಸಾಲ ಮಂಜೂರಾತಿಯ ಕುರಿತು ಗ್ರಾಹಕನಿಗೆ ತಿಳಿಸುತ್ತದೆ. ಗ್ರಾಹಕ ಪ್ರಮಾಣೀಕೃತ ಸಾಲ ದಾಖಲಾತಿಗಳನ್ನು ಉಚಿತ ವೆಚ್ಚದಲ್ಲಿ ನೀಡಲು ಬದ್ಧನಾಗಿರುತ್ತಾನೆ.
  5. ಜಿ ಐ ಸಿ ಹೆಚ್ ಎಫ್ ಎಲ್ ಸಾಲ ನೀಡಿಕೆಯ ವಿಷಯದಲ್ಲಿ ಲಿಂಗ, ಜಾತಿ, ಮತ್ತು ಧರ್ಮದ ಆಧಾರದ ಮೇಲೆ ಎಂದೂ ಬೇಧಭಾವ ಮಾಡುವುದಿಲ್ಲ. ಆದರೆ, ಜಿ ಐ ಸಿ ಹೆಚ್ ಎಫ್ ಎಲ್ ಸಮಾಜದ ವಿವಿಧ ವರ್ಗಗಳಿಗೆ ಯೋಜನೆಯಲ್ಲಿ ಭಾಗವಹಿಸಲು ಅಥವಾ ಸಂಸ್ಥೆ ರಚಿಸಲು ಅಡ್ಡಿಯನ್ನು ಉಂಟುಮಾಡುವುದಿಲ್ಲ.
  6. ಜಿ ಐ ಸಿ ಹೆಚ್ ಎಫ್ ಎಲ್ ಸಾಮಾನ್ಯ ಅವಧಿಯಲ್ಲಿ, ಸಾಲಗಾರನಿಂದಾಗಲೀ ಅಥವಾ ಬ್ಯಾಂಕ್/ಹಣಕಾಸು ಸಂಸ್ಥೆಯಿಂದಾಗಲೀ, ಸಾಲದ ಖಾತೆಯ ವರ್ಗಾವಣೆಗಾಗಿ ಮನವಿಯನ್ನು ಸಂಸ್ಕರಿಸಲು ತನ್ನದೇ ನಿರ್ಧಾರಕ್ಕೆ ಬದ್ಧವಾಗಿರುತ್ತದೆ.
  7. ಪಾವತಿ ಹಿಂದೆಗೆದುಕೊಳ್ಳಲು/ಮುಂದುವರೆಸಲು ಅಥವಾ ಒಪ್ಪಂದದ ಅಡಿಯಲ್ಲಿ ಕೆಲಸ ಮಾಡಲು ಅಥವಾ ಹೆಚ್ಚುವರಿ ಭದ್ರತೆಯ ಕುರಿತು, ಜಿ ಐ ಸಿ ಹೆಚ್ ಎಫ್ ಎಲ್ ಸಾಲ ಒಪ್ಪಂದದ ಅನುಸರಣೆಯೊಂದಿಗೆ ಸಾಲಗಾರನಿಗೆ ಸೂಚನೆಯನ್ನು ಕಳುಹಿಸುತ್ತದೆ. ಜಿ ಐ ಸಿ ಹೆಚ್ ಎಫ್ ಎಲ್ ಸಾಲಗಾರ ಜಿ ಐ ಸಿ ಹೆಚ್ ಎಫ್ ಎಲ್ ನಲ್ಲಿ ಸಲ್ಲಿಸಬೇಕಾದ ಇತರೆ ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಹೊಣೆಗಾರಿಕೆಗೆ ಒಳಪಟ್ಟಂತೆ ಸಾಲದ ಮೊಬಲಗಿನ ಹೆಚ್ಚುವರಿಯ ವಾಸ್ತವದ ಆಧಾರದ ಮೇಲೆ ಅಥವಾ ಎಲ್ಲಾ ಬಾಕಿಯ ಮರುಪಾವತಿಯ ನಂತರ ಎಲ್ಲಾ ಭದ್ರತೆಗಳನ್ನೂ ಬಿಡುಗಡೆ ಮಾಡುತ್ತದೆ. ಇಂತಹ ಹಕ್ಕು ಚಲಾಯಿಸಲ್ಪಟ್ಟರೆ ಮತ್ತು ಸಾಲಗಾರನಿಗೆ ಉಳಿದ ಬಾಧ್ಯತೆಯ ಕುರಿತಾದ ಪೂರ್ಣ ವಿವರಗಳ ಬಗ್ಗೆ ಸೂಚನೆ ನೀಡಿದಲ್ಲಿ, ಕಂಪನಿಯು ಬದ್ಧವಾದ ನಿಬಂಧನೆಗಳ ಅಡಿಯಲ್ಲಿ ಇಂತಹ ಎಲ್ಲಾ ಸೂಕ್ತ ಬಾಧ್ಯತೆಗಳನ್ನು ನೀಡುವವರೆಗೆ/ಪಾವತಿಸುವವರೆಗೆ ಭದ್ರತೆಯನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ.
 • ಖಾತರಿದಾರರು: ಒಬ್ಬ ವ್ಯಕ್ತಿಯನ್ನು ಸಾಲಕ್ಕೆ ಖಾತರಿದಾರನೆಂದು ಪರಿಗಣಿಸಿದಲ್ಲಿ, ಜಿ ಐ ಸಿ ಹೆಚ್ ಎಫ್ ಎಲ್ ಆತ/ಆಕೆಗೆ ಕೆಳಗಿನ ಸ್ವೀಕೃತಿಯ ಕುರಿತು ಮಾಹಿತಿ ನೀಡುತ್ತದೆ
  1. ಖಾತರಿದಾರನಾಗಿ ಹೊಣೆಗಾರಿಕೆಯ ನಿಯಮಗಳನ್ನು ವಿವರಿಸುವ ಖಾತರಿ ಪತ್ರ/ಹಕ್ಕುಪತ್ರವನ್ನು ನೀಡುತ್ತದೆ.
  2. ಜಿ ಐ ಸಿ ಹೆಚ್ ಎಫ್ ಎಲ್ ಆತ/ಆಕೆ ಖಾತರಿದಾರನಾಗಿರುವ ಸಾಲಗಾರನಿಂದ ಸಾಲದಲ್ಲಿ ಯಾವುದೇ ಪೂರ್ವನಿರ್ಧಾರಿತ ಸೇವೆಯಿದ್ದಲ್ಲಿ ಈ ಕುರಿತು ಆತ/ಆಕೆಗೆ ತಿಳಿಸಲಾಗುತ್ತದೆ
 • ಶಾಖೆ ಸಮಾಪ್ತಿ/ಬದಲಾವಣೆ: ಜಿ ಐ ಸಿ ಹೆಚ್ ಎಫ್ ಎಲ್ ತನ್ನ ಶಾಖೆ ಕಚೇರಿಯನ್ನು ಮುಚ್ಚಿದಲ್ಲಿ/ಬದಲಾಯಿಸಿದಲ್ಲಿ ಈ ಕುರಿತು ಗ್ರಾಹಕನಿಗೆ ಸೂಚನೆ ಕಳುಹಿಸುತ್ತದೆ.
 • ದೂರುಗಳು: ಜಿ ಐ ಸಿ ಹೆಚ್ ಎಫ್ ಎಲ್ ಕಾನೂನು, ಅಳವಡಿಸಿಕೊಂಡ ನಿಯಮ ಮತ್ತು ಪ್ರಕ್ರಿಯೆಗಳ ಚೌಕಟ್ಟಿನೊಳಗೆ ಗ್ರಾಹಕನ ಸಂತೃಪ್ತಿಗಾಗಿ ಕಾರ್ಯ ನಿರ್ವಹಿಸುತ್ತದೆ ಯಾವುದೇ ದೂರುಗಳಿದ್ದಲ್ಲಿ, ಗ್ರಾಹಕ ಆತ/ಆಕೆ, ಆತ/ಆಕೆಯ ಖಾತೆ ಇರುವ ಉದ್ದಿಮೆ ಸ್ಥಳದ ಅಧಿಕಾರಿಯನ್ನು ಸಂಪರ್ಕಿಸಿ, ಅಧಿಕಾರಿಯ ಬಳಿ ಲಭ್ಯವಿರುವ ’ದೂರು ನೋಂದಣಿ ಪುಸ್ತಕ’ ದಲ್ಲಿ ದೂರು ದಾಖಲಿಸಬಹುದಾಗಿದೆ ದೂರು ದಾಖಲಿಸಿದ ನಂತರ, ಗ್ರಾಹಕ ದೂರು ಸಂಖ್ಯೆಯನ್ನು ಮತ್ತು ಭವಿಷ್ಯದ ಪರಾಮರ್ಶೆಗಾಗಿ ದಿನಾಂಕವನ್ನು ಪಡೆಯುತ್ತಾನೆ ದಯವಿಟ್ಟು ನಮ್ಮ ವೆಬ್ ಸೈಟ್ www.gichfindia.com ಗೆ ಲಾಗಿನ್ ಮಾಡಿ,) ಸ್ಪಂದನೆ ತೃಪ್ತಿದಾಯಕವಾಗಿಲ್ಲದಿದ್ದರೆ ಅಥವಾ ಯಾವುದೇ ಸ್ಪಂದನೆ ದೊರೆಯದಿದ್ದಲ್ಲಿ, ಗ್ರಾಹಕ ದೂರನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು -ಪತ್ರದ ಮೂಲಕ :ಉಪಾಧ್ಯಕ್ಷರು
  ಜಿಐಸಿ ಹೌಸಿಂಗ್ ಫೈನಾನ್ಸ್ ಲಿ.
  ಯೂನಿವರ್ಸಲ್ ಇನ್ಶೂರೆನ್ಸ್ ಬಿಲ್ಡಿಂಗ್, 3 ನೆಯ ಮಹಡಿ,
  ಸರ್ ಪಿ.ಎಂ ರೋಡ್, ಫೋರ್ಟ್,
  ಮುಂಬೈ -400 001.ಇಮೇಲ್ ಮೂಲಕ: corporate@gichf.com
 • ಸಾಮಾನ್ಯ: ಜಿ ಐ ಸಿ ಹೆಚ್ ಎಫ್ ಎಲ್ ಮೇಲೆ ನಮೂದಿಸಲಾದ ಯಾವುದೇ ಸಂಹಿತೆಯನ್ನು ತಿದ್ದುಪಡಿ ಮಾಡುವ/ಮಾರ್ಪಡಿಸುವ/ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿದೆ ಹಾಗೂ ಕಾಲಕಾಲಕ್ಕೆ ಸಂಹಿತೆಯಲ್ಲಿ ಉಲ್ಲೇಖಿಸಿರುವ ಬಾಧ್ಯತೆಗಳಿಗೆ ಪರ್ಯಾಯ / ತಿದ್ದುಪಡಿಗಳ ಕುರಿತ ಅಪ್ ಡೇಟ್ ನೀಡುತ್ತದೆ.  ಇಂತಹ ಮಾರ್ಪಡಿಸುವಿಕೆ/ತಿದ್ದುಪಡಿಗಳನ್ನು ಶಾಖೆ/ಕಾರ್ಪೊರೇಟ್ ಕಚೇರಿಗಳ ಸೂಚನಾ ಫಲಕದಲ್ಲಿ ಗ್ರಾಹಕರ ಸೌಲಭ್ಯ ಮತ್ತು ಮಾಹಿತಿಗಾಗಿ ಪ್ರದರ್ಶಿಸಲಾಗುತ್ತದೆ.

Leave a Reply

Your email address will not be published. Required fields are marked *

*
*
Website