ನಮ್ಮಿಂದ ಸಾಲ ಕೋರಿಕೆಗಾಗಿ  ಅಪ್ಲಿಕೇಶನ್ ಫಾರ್ಮ್  ಅನ್ನು ನೀವು ಭರ್ತಿ ಮಾಡುವ ಅಗತ್ಯವಿದೆ. ಈ ಅರ್ಜಿಯನ್ನು ನಮ್ಮ ಯಾವುದೇ ಶಾಖೆಯಿಂದ ಪಡೆಯಬಹುದು  ಅಥವಾ ಇಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ..

ಅರ್ಜಿಯು ಅನೇಕ ವಿಭಾಗಗಳನ್ನು ಹೊಂದಿರುತ್ತದೆ.

ಮುಖ್ಯ ಅಪ್ಲಿಕೇಶನ್: ಈ ವಿಭಾಗ ನಿರ್ದಿಷ್ಟ ಯೋಜನೆಯ ಅಡಿಯಲ್ಲಿ ನಿರ್ದಿಷ್ಟ ಮೊಬಲಗಿನ ಸಾಲವನ್ನು ಕುರಿತು ಕೇಳುವ ಔಪಚಾರಿಕ ವಿವರಣೆಯನ್ನು ಹೊಂದಿರುತ್ತದೆ. ಯೋಜನೆಯ ವಿವರಗಳನ್ನು ಇಲ್ಲಿ  ನೋಡಬಹುದು.

ಅರ್ಜಿದಾರರ ಸಂಖ್ಯೆ: ಕನಿಷ್ಟ ಒಬ್ಬ ಅರ್ಜಿದಾರನ ಅಗತ್ಯವಿದೆ. ಆದರೆ, ಸಹ ಅರ್ಜಿದಾರನೂ ಇರಬಹುದಾಗಿದೆ.

ವೈಯಕ್ತಿಕ ಮಾಹಿತಿ: ಪ್ರತಿಯೊಬ್ಬ ಅರ್ಜಿದಾರ ಮತ್ತು ಸಹ ಅರ್ಜಿದಾರನಿಗೆ, ಅನೇಕ ವೈಯಕ್ತಿಕ ಮಾಹಿತಿ, ವಾಸಸ್ಥಳದ ಮಾಹಿತಿ ಮತ್ತು ಉದ್ಯೋಗಿ ಮಾಹಿತಿಯನ್ನು ನೀಡುವ ಅಗತ್ಯವಿದೆ. ನೀವು ನಿಮ್ಮ ಪ್ಯಾನ್ ಅಥವಾ ಚುನಾವಣಾ ಐಡಿ ಸಂಖ್ಯೆಯನ್ನು ಸಲ್ಲಿಸುವ ಅಗತ್ಯವಿದೆ ಮತ್ತು ನಿಮ್ಮ ವಾರ್ಷಿಕ ಆದಾಯವನ್ನು ಘೋಷಿಸಬೇಕು.

ಆರ್ಥಿಕ ಮಾಹಿತಿ: : ಒಂದು ಸರಳ ಟೇಬಲ್ ಅರ್ಜಿದಾರ ಮತ್ತು ಸಹ ಅರ್ಜಿದಾರನ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಪಟ್ಟಿಮಾಡಲು ಅನುಕೂಲವಾಗಿರುವಂತೆ ನೀಡಲಾಗಿರುತ್ತದೆ. ಇವು ನಿಮಗೆ ಸಾಲವಾಗಿ ನೀಡಬಹುದಾದ ಮೊಬಲಗು ಮತ್ತು ನಿಮ್ಮ ಅರ್ಹತೆಯನ್ನು ನಿರ್ಧರಿಸಲು ವೇತನ ಸ್ಲಿಪ್, ಆದಾಯ ತೆರಿಗೆ ರಿಟರ್ನ್ಸ್ ಇತ್ಯಾದಿ ರೀತಿಯಲ್ಲಿ ನೀಡಿರುವ ಆರ್ಥಿಕ ದಾಖಲಾತಿಗಳಿಗೆ ವ್ಯತಿರಿಕ್ತವಾಗಿ ಹೊಂದಿಸುತ್ತದೆ. ಇವುಗಳ ಹೊರತಾಗಿ, ನಿಮ್ಮ ಪ್ರಸ್ತುತ ಸಾಲದ ವಿವರಗಳನ್ನೂ ನೀಡುವ ಅಗತ್ಯವಿದೆ.

ಆಸ್ತಿ ವಿವರಗಳು: : ಆಸ್ತಿಯ ಸ್ಥಳ, ಶೀರ್ಷಿಕೆ ಸ್ಪಷ್ಟವಾಗುತ್ತದೆ ಇಲ್ಲವೋ, ಇಲ್ಲವೇ, ಭೂಮಿಯ ಸ್ಥಳ (ಸ್ವಯಂ ನಿರ್ಮಿತ ಮನೆ), ಅಥವಾ ಫ್ಲ್ಯಾಟ್ ನ ಪ್ರದೇಶ, ಮತ್ತು ಇತರ ವಿವರಗಳನ್ನು ಭರ್ತಿ ಮಾಡಬೇಕು.

ಸಾಮಾನ್ಯ ಘೋಷಣೆಗಳು: ಇವು ಆಸ್ತಿಯನ್ನು ಹೇಗೆ ಬಳಸಲಾಗುತ್ತಿದೆ ಮತ್ತು ಆಸ್ತಿಯ ಪ್ರಸ್ತುತ ಸ್ಥಿತಿ ಏನು ಎಂದು ತಿಳಿಯಲು ನೀಡಿರುವ ಸರಳ ಪ್ರಶ್ನೆಗಳಾಗಿವೆ.

ಪರಾಮರ್ಶೆಗಳು: ನಿಮ್ಮೊಂದಿಗೆ ಕೆಲಸ ಮಾಡುವ ಕನಿಷ್ಟ ಇಬ್ಬರು ವ್ಯಕ್ತಿಗಳ ಪರಾಮರ್ಶೆ ಅಥವಾ ಅನುಕೂಲಕರ ಸಮಯದಲ್ಲಿ ನಿಮ್ಮ ಔದ್ಯೋಗಿಕ ಮತ್ತು/ಅಥವಾ ವೈಯಕ್ತಿಕ ಸಾಮರ್ಥ್ಯ

ಹೆಚ್ಚುವರಿ ಮಾಹಿತಿ: ನಿಮ್ಮ ನಿಯಮಿತ ವೇತನದ ಖಾತೆಯ ವಿವರಗಳನ್ನು ಸಹ ಅಪ್ಲಿಕೇಶನ್ ಅರ್ಜಿಯಲ್ಲಿ ಭರ್ತಿ ಮಾಡುವ ಅಗತ್ಯವಿದೆ.

ಫೋಟೋಗ್ರಾಫ್ ಗಳು: ಅರ್ಜಿದಾರ ಮತ್ತು ಸಹ ಅರ್ಜಿದಾರನ ಕನಿಷ್ಟ ಒಂದು ಭಾವಚಿತ್ರವನ್ನು ಸಹಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

ಖಾತರಿದಾರನ ಫಾರ್ಮ್: ಪ್ರತೀ ಖಾತರಿದಾರನ ವೈಯಕ್ತಿಕ ಮಾಹಿತಿ, ಸಂಪರ್ಕ ಮಾಹಿತಿ, ಮತ್ತು ಆರ್ಥಿಕ ಮಾಹಿತಿಯನ್ನು ಸಲ್ಲಿಸಬೇಕು, ಇದು ಪ್ರತ್ಯೇಕ ಅರ್ಜಿಯಲ್ಲಿದ್ದು, ಇದನ್ನು ಮುಖ್ಯ ಅಪ್ಲಿಕೇಶನ್ ಅರ್ಜಿಯೊಂದಿಗೆ ಡೌನ್ ಲೋಡ್ ಮಾಡಬೇಕು.

ಮಾಲೀಕನ ವಿವರಗಳು: ನಿಮ್ಮ ಮಾಲೀಕ ಪಟ್ಟಿಯಲ್ಲಿಲ್ಲದ ಕಂಪನಿಯನ್ನು ಹೊಂದಿದ್ದಲ್ಲಿ, ಅಥವಾ ಚೆನ್ನಾಗಿ ತಿಳಿದಿಲ್ಲ ಸಂಸ್ಥೆಯ, ಆಗ ಉದ್ದಿಮೆಯ ವಿಧಾನ, ಸ್ಪರ್ಧಿಗಳು, ಕಚೇರಿಗಳ ಸಂಖ್ಯೆ, ಆದಾಯ ಇತ್ಯಾದಿ ವಿವರಗಳ ಕುರಿತ ಸಂಕ್ಷಿಪ್ತ ಸಾರಾಂಶವನ್ನು ನೀಡುವುದು ಉತ್ತಮವಾಗಿದೆ. ಸಾಮಾನ್ಯವಾಗಿ, ವೆಬ್ ಸೈಟ್ ನಲ್ಲಿರುವ ಕಂಪನಿಯ ವಿವರವನ್ನು ನೀಡಿದರೆ ಸಾಕಷ್ಟಾಗುತ್ತದೆ.

ದಾಖಲಾತಿಗಳ ಪರಿಶೀಲನಾಪಟ್ಟಿಯನ್ನು ಎಲ್ಲಾ  ಅಗತ್ಯ ದಾಖಲಾತಿಗಳ ಪ್ರತಿಯೊಂದಿಗೆ ಸಲ್ಲಿಸಿ ಹಾಗೂ ನಿಮ್ಮ ಅಪ್ಲಿಕೇಶನ್ ಸಲ್ಲಿಸಲು ಬರುವಾಗ ಮೂಲ ಪ್ರತಿಗಳನ್ನು ನಿಮ್ಮೊಂದಿಗೆ ತನ್ನಿ.

ಬ್ಯಾಂಕ್ ವಿವರಣೆ: ಇವುಗಳನ್ನು ಸಲ್ಲಿಸುವ ಅಗತ್ಯವಿದ್ದು, ಸಾಮಾನ್ಯವಾಗಿ ಕನಿಷ್ಟ 12 ತಿಂಗಳ ವಿವರಣೆ ಇರಬೇಕು. ಇವು ನಿಮ್ಮ ಚಟುವಟಿಕೆಯ ಮಟ್ಟ (ವಹಿವಾಟಿನ ಸಂಖ್ಯೆ ಮತ್ತು ವಿಧಾನ), ಸರಾಸರಿ ಬ್ಯಾಂಕ್ ಶಿಲ್ಕು, ಚೆಕ್ ರಿಟರ್ನ್ಸ್. ಚೆಕ್ ಬೌನ್ಸ್ ಗಳು, ಮತ್ತು ಪಾವತಿಯ ಕಾಲಾವಧಿ (ಉದಾ. ನಿರ್ದಿಷ್ಟ ಮಧ್ಯಂತರದಲ್ಲಿ ಠೇವಣಿ ಮಾಡಲಾದ ವೇತನ ಮೊಬಲಗು)ಗಳನ್ನು ಪರಿಶೀಲಿಸುತ್ತದೆ.

ವೈಯಕ್ತಿಕ ಚರ್ಚೆಗಳು:

ಸಾಮಾನ್ಯವಾಗಿ, ನೀವು ನಮ್ಮ ಅಧಿಕಾರಿಗಳಲ್ಲಿ ಒಬ್ಬರೊಂದಿಗೆ ಸಂದರ್ಶನ ಎದುರಿಸಬೇಕಾಗುತ್ತದೆ, ಇದು ಅಂಕಿಅಂಶಗಳು ಮತ್ತು ಪ್ರಕ್ರಿಯೆಗಳ ಕುರಿತಾದ ಎಲ್ಲಾ ಸಂದೇಹಗಳನ್ನೂ ನಿವಾರಿಸುತ್ತದೆ. ಕೆಲವೊಮ್ಮೆ, ನಿಮಗೆ ಹೆಚ್ಚುವರಿ ಖಾತರಿದಾರ ಅಥವಾ ವಿವರಗಳನ್ನು ಸಲ್ಲಿಸುವಂತೆ ಕೇಳಲಾಗುತ್ತದೆ.

ಪರಿಶೀಲನೆ:

ನೀಡಲಾದ ಎಲ್ಲಾ ಮಾಹಿತಿಗಳಿಗೆ ಅದರಲ್ಲೂ ವಿಶೇಷವಾಗಿ ಕೆಳಗಿನವುಗಳಿಗೆ ಕ್ಷೇತ್ರ ಪರಿಶೀಲನೆ ನಡೆಸಲಾಗುತ್ತದೆ
•  ವಾಸಸ್ಥಾನದ ವಿಳಾಸ
•  ಕಚೇರಿ ವಿಳಾಸ
•  ಉದ್ಯೋಗಿ ಪರಿಶೀಲನೆ
•  ಬ್ಯಾಂಕ್ ಖಾತೆ ಪರಿಶೀಲನೆ
•  ಮನೆ ಮತ್ತು ಕಚೇರಿಯ ದೂರವಾಣಿ ಸಂಖ್ಯೆಗಳು
•  ಆಸ್ತಿ ವಿಳಾಸ
•  ಹಣಕಾಸು

ಕೆಲವೊಮ್ಮೆ ಅಪ್ಲಿಕೇಶನ್ ನಲ್ಲಿ ನಿಮ್ಮಿಂದ ನೀಡಲಾದ ಮಾಹಿತಿಗಳನ್ನು ಶೀಘ್ರವಾಗಿ ಪರಿಶೀಲಿಸಲಾಗುತ್ತದೆ. ನಿಮ್ಮ ಮಾನದಂಡಗಳು ಒಮ್ಮೆ ಅರ್ಹವೆಂದು ಕಂಡುಬಂದಲ್ಲಿ, ನಿಮ್ಮ ಮತ್ತು ನಮ್ಮ ನಡುವೆ ವಿಶ್ವಾಸ ವೃದ್ಧಿಸಲು ಸುಲಭವಾಗುತ್ತದೆ.

ಸಾಲ ಅನುಮೋದನೆ:

ಒಮ್ಮೆ ನಿಮ್ಮ ಅಪ್ಲಿಕೇಶನ್ ಸಂಸ್ಕರಣೆಗೊಳಪಡಿಸಿದ ನಂತರ ಮತ್ತು ನೀವು ಅರ್ಜಿಸಲ್ಲಿಸಿದ ಸಾಲದ ಮೊಬಲಗಿನ ಆಧಾರದ ಮೇಲೆ, ಹಾಗೂ ಮರುಪಾವತಿಯ ಸಾಮರ್ಥ್ಯದ ಮೇಲೆ ಅಂತಿಮ ಸಾಲದ ಮೊಬಲಗನ್ನು ನಿಮಗೆ ತಿಳಿಸಲಾಗುತ್ತದೆ. ನಿಮಗೆ ನೀಡಲಾದ ಮಂಜೂರಾತಿಯ ಅಡಿಯಲ್ಲಿರುವ ನಿಯಮ ಮತ್ತು ನಿಬಂಧನೆಗಳ ಕುರಿತ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ. ಈ ನಿಯಮ ಮತ್ತು ನಿಬಂಧನೆಗಳನ್ನು ಸಾಲದ ಮೊಬಲಗು ವಿತರಣೆಯಾಗುವ ಮೊದಲು ಪೂರ್ಣಗೊಳಿಸಬೇಕು.

ನೀಡಿಕೆ ಪತ್ರ:
ನೀಡಿಕೆ ಪತ್ರ ಸಾಲದ ಮೊಬಲಗು, ಬಡ್ಡಿದರ, ಅವಧಿ, ಮರುಪಾವತಿಯ ವಿಧಾನ ಮತ್ತು ಇತರೆ ವಿವರಗಳು ಮತ್ತು ವಿಶೇಷ ನಿಬಂಧನೆಗಳನ್ನು ಹೊಂದಿರುತ್ತದೆ.

ಸ್ವೀಕೃತಿ ಪತ್ರವನ್ನು ನಮ್ಮಿಂದ ನೀಡಲಾಗುವ ಸ್ಟ್ಯಾಂಡರ್ಡ್ ಮಾದರಿಯಲ್ಲಿ ನಿಮಗೆ ನೀಡಲಾಗುತ್ತದೆ, ಇದರೊಂದಿಗೆ ಮಂಜೂರಾತಿ ಪತ್ರದಲ್ಲಿರುವ ನಿಯಮ ಮತ್ತು ನಿಬಂಧನೆಗಳ ದಾಖಲಾತಿಯನ್ನು ನೀಡಲಾಗುತ್ತದೆ. ಇದು ಕೇವಲ ನಿಮ್ಮ ಸಾಲ ಪ್ರಸ್ತಾವನೆಯ ಆರ್ಥಿಕ ಅನುಮೋದನೆ ಮಾತ್ರ. ಸಾಲ ವಿತರಣೆಯನ್ನು ನೀಡಿಕೆಯನ್ನು ಸ್ವೀಕರಿಸಿದ ನಂತರ ಮತ್ತು ಅಡಮಾನ ಕಾನೂನುಬದ್ಧವಾಗಿ ಮತ್ತು ತಾಂತ್ರಿಕವಾಗಿ ಸ್ಪಷ್ಟವಾಗಿ ಜಾರಿಯಾದಾಗ ಮಾತ್ರ ನೀಡಲಾಗುತ್ತದೆ.

ಕಾನೂನುಬದ್ಧ ದಾಖಲಾತಿಗಳ ಸಲ್ಲಿಕೆ:
ಒಮ್ಮೆ ನೀವು ನೀಡಿಕೆಯನ್ನು ಸ್ವೀಕರಿಸಿದ ನಂತರ, ನೀವು ಆಸ್ತಿಯ ಮೂಲ ದಾಖಲಾತಿಗಳನ್ನು ಹಸ್ತಾಂತರಿಸಬೇಕು, ಇದರಿಂದ ಸಾಲ ಪೂರ್ಣ ಮರುಪಾವತಿ ಮಾಡುವವರೆಗೂ ಅದನ್ನು ಭದ್ರತೆಯಾಗಿ ಇಡಲಾಗುತ್ತದೆ. ಸಾಲದ ನಿಬಂಧನೆಯ ಪ್ರಕಾರ ಇತರೆ ಯಾವುದೇ ದಾಖಲಾತಿಗಳಾದ ಪೂರಕ ಭದ್ರತೆಗಳ ಅಗತ್ಯವಿದಲ್ಲಿ ಅದನ್ನೂ ಸಹ ಈ ಹಂತದಲ್ಲಿ ಸಲ್ಲಿಸಬೇಕು.

ಒಪ್ಪಂದಕ್ಕೆ ಸಹಿಮಾಡುವುದು:
ಒಪ್ಪಂದ ಮತ್ತು ಇತರೆ ದಾಖಲಾತಿಗಳನ್ನು ಬಾಕಿ ಪ್ರಕ್ರಿಯೆಗಳ ಪ್ರಕಾರ ಸಹಿ ಮಾಡುವ ಅಗತ್ಯವಿದೆ.

Leave a Reply

Your email address will not be published. Required fields are marked *

*
*
Website