Ashok-K-Royಮಿ. ಅಶೋಕ್ ಕೆ.ರಾಯ್ : ಸಮಿತಿಯ ಅಧ್ಯಕ್ಷರು

ಖರಗಪುರದ ಭಾರತೀಯ ತಾಂತ್ರಿಕ ಸಂಸ್ಥೆಯಿಂದ ಬಿ.ಟೆಕ್ (ಪದವಿ) ಕೃಷಿ ಇಂಜಿನಿಯರ್ ಪಡೆದಿದ್ದು, ಭಾರತೀಯ ವಿಮಾ ಸಂಸ್ಥೆಯಲ್ಲಿ ಅಧ್ಯಕ್ಷರಾಗಿರುವ ಮಿ. ಅಶೋಕ್ ಕೆ ರಾಯ್ 1979 ರಲ್ಲಿ ಭಾರತೀಯ ಸಾಮಾನ್ಯ ವಿಮಾ ಉದ್ದಿಮೆಗೆ ನೇರ ನೇಮಕಾತಿ ಅಧಿಕಾರಿಯಾಗಿ ಸೇರ್ಪಡೆಯಾದರು. ಅವರು ವಿವಿಧ ಸಾಮರ್ಥ್ಯಗಳಲ್ಲಿ 29 ವರ್ಷಗಳ ಕಾಲ ಓರಿಯೆಂಟಲ್ ವಿಮಾ ಕಂ ಲಿ ನಲ್ಲಿ ಕಾರ್ಯನಿರ್ವಹಿಸಿದರು, ಪ್ರಥಮ ಬಾರಿಗೆ ಅವರು ಪ್ರಾಪರ್ತೀ ಅಂಡರ್ ರೈಟರ್ ಆಗಿ ಸೇರಿದ್ದು, ಜೂನ್ 2008 ರಲ್ಲಿ ಜಿಐಸಿ ರೆ ಯಲ್ಲಿ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡರು

ಡಿಸೆಂಬರ್ 2011 ರಲ್ಲಿ ಮಿ. ರಾಯ್ ಭಾರತೀಯ ಕೃಷಿ ವಿಮಾ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅವರು ಜನವರಿ 2012 ರಲ್ಲಿ ಜಿಐಸಿ ರೆ ಯ ಸಿಎಂಡಿ ಆಗಿ ಅಧಿಕಾರ ವಹಿಸಿಕೊಂಡು, ಏಪ್ರಿಲ್ 2012 ರಲ್ಲಿ ಜಿಐಸಿ ರೆ ಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ತಮ್ಮ ಹುದ್ದೆಯನ್ನು ಅಲಂಕರಿಸಿದರು.

ಮಿ. ರಾಯ್ ಅಸೆಟ್ ಮ್ಯಾನೇಜ್ ಮೆಂಟ್ ಕೋ. ಲಿ ನ ಅಧ್ಯಕ್ಷರೂ ಸಹ ಆಗಿದ್ದಾರೆ. ಅವರು ಅನೇಕ ಕಂಪನಿಗಳ ಸಮಿತಿಯ ನಿರ್ದೇಶಕರಾಗಿದ್ದು, ಅವುಗಳಲ್ಲಿ ಭಾರತೀಯ ಜೀವ ವಿಮಾ ನಿಗಮ; ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್, ಈಸ್ಟ್ ಆಫ್ರಿಕಾ ರೀ ಇನ್ಶೂರೆನ್ಸ್ ಕೋ ಲಿ., ಕೆನ್ ಇಂಡಿಯಾ ಅಶ್ಯೂರೆನ್ಸ್ ಕೋ ಲಿ., ಏಷಿಯನ್ ರೀ ಇನ್ಶೂರೆನ್ಸ್ ಕಾರ್ಪೊರೇಷನ್ ಮತ್ತು ಭಾರತೀಯ ಇಸಿಜಿಸಿ ಲಿ ಕೆಲವು.

ಮಿ. ರಾಯ್ ಟಿ ಎ ಸಿ ಯ ತಾಂತ್ರಿಕ ಉಪ ಸಮಿತಿಯ ಸದಸ್ಯರಾಗಿದ್ದಾರೆ (ಇಂಜಿನಿಯರಿಂಗ್) ಹಾಗೂ ಪ್ರಮುಖ ವಿಮಾ ಪರಿಹಾರಗಳ ಅಭಿವೃದ್ಧಿಯೊಂದಿಗೆ (ಐ ಎನ್ ಎಲ್ ಐ ಎ ಎಸ್) ಸಹಯೋಗವನ್ನು ಹೊಂದಿದ್ದಾರೆ. ಅವರು ಫೈರ್ ಮತ್ತು ಇಂಜಿನಿಯರ್ ವಿಭಾಗದ ಅಭಿವೃದ್ಧಿಯ ಪ್ರಮುಖ ಸಮೂಹದ ಮುಖ್ಯಸ್ಥರೂ ಆಗಿದ್ದಾರೆ. ಅವರು ಆಡಳಿತದಲ್ಲಿ ಬದಲಾವಣೆ, ಅನುಸರಣಾ ಕೌಶಲ್ಯ, ಮತ್ತು ಕಾರ್ಪೊರೇಟ್ ಆಡಳಿತಗಳ ಕುರಿತು ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಭಾಷಣಕಾರರಾಗಿದ್ದಾರೆ. ಅವರು ಜಿಐಸಿ ರೆ ಯಲ್ಲಿನ ಮಾನವ ಸಂಪನ್ಮೂಲ ಇಲಾಖೆಯಲ್ಲಿನ ಅನೇಕ ಪ್ರಥಮಗಳಿಗೆ ಕಾರಣಕರ್ತರಾಗಿದ್ದಾರೆ. ಜಿಐಸಿ ರೇ ಯಲ್ಲಿ ಅನ್ವೇಷಣಾ ಕೇಂದ್ರವನ್ನು ಸ್ಥಾಪಿಸಿರುವುದು ಜಿಐಸಿ ರೇ ಯ ಇತ್ತೀಚಿನ ಬೆಳವಣಿಗೆಯಾಗಿದೆ.

G-Srinivasanಮಿ. ಜಿ. ಶ್ರೀನಿವಾಸನ್: ಬಿಕಾಂ, ಎಫ್ ಐಐಐ, ಎ ಸಿ ಎಂ ಎ

ಮಿ. ಜಿ. ಶ್ರೀನಿವಾಸನ್: ಅಕ್ಟೋಬರ್ 18, 2012 ರಿಂದ ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನ್ಯೂ ಇಂಡಿಯಾಗೆ ನೇಮಕವಾಗುವ ಮೊದಲು, ಅವರು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿ ನ ಸಿಎಂಡಿ ಆಗಿದ್ದರು. ಆವ್ರು ಟ್ರಿನಿಡಾಡ್ ಮತ್ತು ಟೊಬ್ಯಾಗೋವಿನ ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ (ಟಿ ಎನ್ ಟಿ) ಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಹಾಗೂ ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ ಗೆ ಜನರಲ್ ಮ್ಯಾನೇಜರ್ ಆಗಿದ್ದರು. ಅವರು ವಿಮಾ ಉದ್ದಿಮೆಯಲ್ಲಿ 33 ಕ್ಕೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಜುಲೈ 28, 2010 ರಿಂದ ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕರಾಗಿದ್ದಾರೆ. ಅವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ (ಟ್ರಿನಿಡಾಡ್ ಅಂಡ್ ಟೊಬ್ಯಾಗೊ) ಲಿ , ಪ್ರೆಸ್ಟೀಜ್ ಅಶ್ಯೂರೆನ್ಸ್ ಪಿ ಎಲ್ ಸಿ, ನೈಜೀರಿಯಾ, ಮತ್ತು ಇಂಡಿಯಾ ಇಂಟರ್ ನ್ಯಾಷನಲ್ ಇನ್ಶೂರೆನ್ಸ್ ಪಿ ಎಲ್ ಸಿ, ಸಿಂಗಾಪುರ ದ ನಿರ್ದೇಶಕರಾಗಿದ್ದಾರೆ.

A-K-Saxena-ಡಾ. ಎ ಕೆ ಸಕ್ಸೇನಾ:

ಡಾ. ಎ ಕೆ ಸಕ್ಸೇನಾ ಡಾ. ಎ ಕೆ ಸಕ್ಸೇನಾ 12 ಜೂನ್ 2012 ರಿಂದ ಜಾರಿಯಾಗುವಂತೆ ದೆಹಲಿಯ ಓರಿಯೆಂಟಲ್ ಇನ್ಶೂರೆನ್ಸ್ಕಂಪನಿ ಲಿ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಡಾ. ಎ ಕೆ ಸಕ್ಸೇನಾ ಮೊದಲು ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿ ನಲ್ಲೇ ಜನರಲ್ ಮ್ಯಾನೇಜರ್ ಆಗಿ ನೇಮಕವಾಗಿದ್ದರು.ಡಾ. ಎ ಕೆ ಸಕ್ಸೇನಾ ಪಶುವೈದ್ಯ ವಿಜ್ಞಾನದಲ್ಲಿ ಪದವಿ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ಭಾರತೀಯ ವಿಮಾ ಸಂಸ್ಥೆಯ ಸಹಾಯಕ ಸದಸ್ಯರೂ ಆಗಿದ್ದರು.

ಡಾ ಎ. ಕೆ ಸಕ್ಸೇನಾ ತಮ್ಮ ವೃತ್ತಿಯನ್ನು 1979 ರಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ (ಎನ್ ಐ ಎ) ಯಲ್ಲಿ ಅಧಿಕಾರಿಯಾಗಿ ನೇಮಕವಾಗುವ ಮೂಲಕ ಆರಂಭಿಸಿದರು. ಹಾಗೂ ಅವರು ಉತ್ತರ ಪ್ರದೇಶ ಹಾಗೂ ಮುಂಬೈಗಳಲ್ಲಿ ಫಿಲಿಪ್ಪೀನ್ಸ್ ನ ಮನಿಲಾ ಹಾಗೂ ನೈರೋಬಿಯ ಕೆನ್ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ ಗಳನ್ನು ಒಳಗೊಂಡಂತೆ ಅನೇಕ ಕಚೇರಿಗಳಲ್ಲಿ ವಿವಿಧ ಹುದ್ದೆ ಹಾಗೂ ಸಿಬ್ಬಂದಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅವರು ಸಿಂಗಾಪುರದ ಇಂಡಿಯಾ ಇಂಟರ್ ನ್ಯಾಷನಲ್ ಇನ್ಶೂರೆನ್ಸ್ ಪ್ರೈ ನ ನಿರ್ದೇಶಕರೂ ಆಗಿದ್ದಾರೆ

Milind-A-Kharatಮಿ. ಮಿಲಿಂದ್ ಕಾರಟ್:

ಮಿ. ಮಿಲಿಂದ್ ಕಾರಟ್ ಅವರು ಅಕ್ಟೋಬರ್ ನಲ್ಲಿ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕೋ ಲಿ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿದ್ದಾರೆ.

ಶ್ರೀ ಕಾರಟ್ ಬಾಂಬೆ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಲ್ ಎಲ್ ಬಿ ಪಡೆದಿದ್ದಾರೆ. ಅವರು ಭಾರತೀಯ ವಿಮಾ ಸಂಸ್ಥೆಯ ಸದಸ್ಯರಾಗಿದ್ದಾರೆ.

ಶ್ರೀ ಕಾರಟ್ ತಮ್ಮ ವೃತ್ತಿಯನ್ನು 1979 ರಲ್ಲಿ ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಶಾಖೆಯಲ್ಲಿ ನೇರ ನೇಮಕಾತಿ ಅಧಿಕಾರಿಯಾಗಿ ಆರಂಭಿಸಿದರು ಹಾಗೂ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ ನಲ್ಲಿ ಪೂರಕವಾಗಿ ವಲಯ ವ್ಯವಸ್ಥಾಪಕ, ಹಿರಿಯ ವಲಯ ವ್ಯವಸ್ಥಾಪಕ, ಪ್ರಾದೇಶಿಕ ಅಧಿಕಾರಿ ಇತ್ಯಾದಿ ವಿವಿಧ ಹುದ್ದೆಗಳನ್ನು ವಿವಿಧ ಮಟ್ಟದಲ್ಲಿ ನಿರ್ವಹಿಸಿದ್ದಾರೆ.

ಶ್ರೀ ಕಾರಟ್ ಫಿಜಿ ದ್ವೀಪಗಳು, ಮತ್ತು ಜಪಾನ್ ನ ಟೋಕಿಯೋದಲ್ಲಿ ಎರಡು ಪ್ರಮುಖ ಅಂತಾರಾಷ್ಟ್ರೀಯ ಸ್ಥಾನವನ್ನು ಹೊಂದಿದ್ದಾರೆ. ಅವರು ಫಿಜಿಗಾಗಿ 1995 ರಿಂದ 2001 ರವರೆಗೆ ಮುಖ್ಯ ವ್ಯವಸ್ಥಾಪಕರಾಗಿ ಫಿಜಿಯಲ್ಲಿದ್ದಾಗಿನ ಅವಧಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಗುರುತಿಸಿ, ಪ್ರಶಸ್ತಿ ಪಡೆದಿದ್ದಾರೆ. ಆವ್ರು ಇನ್ಶೂರೆನ್ಸ್ ಕೌನ್ಸಿಲ್ ಆಫ್ ಫಿಜಿಯ ಅಧ್ಯಕ್ಷರು ಮತ್ತು ಫಿಜಿ ರೀ ಇನ್ಶೂರೆನ್ಸ್ ಕಾರ್ಪೊರೇಷನ್ ನ ನಿರ್ದೇಶಕರಾಗಿ ಹುದ್ದೆಯನ್ನು ಅಲಂಕರಿಸಿದ್ದರು ಮತ್ತು ಅವರು 1998 ರ ಫಿಜಿ ವಿಮಾ ಕಾಯ್ದೆಯನ್ನು ಪರಿಷ್ಕರಿಸಿ ಹೊಸ ಕೊಡುಗೆಯನ್ನು ನೀಡಿದರು ಹಾಗೂ ಇವರು ಫಿಜಿಯ ನ್ಯಾಷನಲ್ ರೋಡ್ ಸೇಫ್ಟಿ ಕೌನ್ಸಿನ್ ನ ವಿಶಿಷ್ಟ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಫಿಜಿಯ ರಸ್ತೆ ಸುರಕ್ಷತೆಯ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದಾರೆ.

ಶ್ರೀ ಕಾರಟ್ 2004 ರಿಂದ 2007 ರವರೆಗೆ ಜಪಾನ್ ನ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕೋ ಲಿ ನ ಕಾರ್ಯನಿರ್ವಹಣಾ ಮುಖ್ಯಾಧಿಕಾರಿಯಾಗಿ ನೇಮಕವಾಗಿದ್ದರು. ಅವರು ಜಪಾನ್ ನ ಫಾರಿನ್ ನಾನ್-ಲೈಫ್ ಇನ್ಶೂರೆನ್ಸ್ ಅಸೋಸಿಯೇಶನ್ ನ ವಿಶಿಷ್ಟ ಸಮಿತಿ ಸದಸ್ಯರಾಗಿದ್ದರು ಹಾಗೂ 2007 ರಲ್ಲಿ ಇಂಡೋ-ಜಪಾನ್ ಫ್ರೆಂಡ್ ಶಿಪ್ ನ ಆಚರಣೆಗಾಗಿ ಹಣಕಾಸು ಸಮಿತಿಯ ಸದಸ್ಯರಾಗಿದ್ದರು.

ಅವರು ಮಾನವ ಸಂಪನ್ಮೂಲ, ತರಬೇತಿ, ಮೆರೀನ್ ಕಾರ್ಗೋ, ಮೆರೀನ್ ಹಲ್, ಮೋಟಾರ್ ಮತ್ತು ಕಾನೂನು ಇಲಾಖೆಗಳ ಕ್ಷೇತ್ರಗಳಿಂದ ಅನುಭವವನ್ನು ಪಡೆದರು.

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕೋ., ಲಿ., ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕನಾಗುವ ಮೊದಲು, ಅವರು ನವದೆಹಲಿಯ ಭಾರತೀಯ ಕೃಷಿ ವಿಮಾ ಕಂಪನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

V-Ramasamyಮಿ. ವಿ ರಾಮಸಾಮಿ:

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, 1975 ರಲ್ಲಿ ನೇರ ನೇಮಕಾತಿ ಅಧಿಕಾರಿಯಾಗಿ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿ., ಗೆ ಸೇರಿದರು. ಇವರ ಅವಧಿಯಲ್ಲಿ, ಅನೇಕ ಸಾಮರ್ಥ್ಯಗಳಲ್ಲಿ ಕಾರ್ಯನಿರ್ವಹಿಸಿದ್ದು, 2005 ರಲ್ಲಿ, ಅವರು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಭಡ್ತಿ ಪಡೆದರು.

ಅವರು ನ್ಯಾಷನಲ್ ಇನ್ಶೂರೆನ್ಸ್ ಕೋ ಲಿ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ಟೋಬ2005 ರಿಂದ ಮೇ 2009 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ನಿವೃತ್ತಿಯ ನಂತರ, ಅವರು ಮೂರು ವರ್ಷಗಳ ಕಾಲ ತಮಿಳುನಾಡಿನ ವಿಮಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.

Kamlesh-S-Vikamseyಮಿ. ಕಮಲೇಶ್ ಶಿವ್ ಜೀ ವಿಕಮ್ಸೇ:

ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಕಾಂ ಪದವೀಧರರಾದ ಇವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಲೆಕ್ಕಪತ್ರ ಮತ್ತು ಹಣಕಾಸು, ತೆರಿಗೆ ಮತ್ತು ಕಾರ್ಪೊರೇಟ್ ಸಲಹಾ ಸೇವೆಯಲ್ಲಿ 30 ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಯುನೈಟೆಡ್ ನೇಷನ್ಸ್ ಡೆವೆಲಪ್ ಮೆಂಟ್ ಪ್ರೋಗ್ರಾಂ (ಯು ಎನ್ ಡಿ ಪಿ) ಯ ಲೆಕ್ಕಪತ್ರ ಸಲಹಾ ಸಮಿತಿ, ನ್ಯೂಯಾರ್ಕ್ ಮತ್ತು ಭಾರತೀಯ ಚಾರ್ಟೆರ್ಡ್ ಅಕೌಂಟೆಂಟ್ ಗಳ ಸಂಸ್ಥೆಗಳ ಪ್ರಾಧಿಕಾರದ ಅಧಿಕಾರಿ ಸದಸ್ಯರಾಗಿದ್ದಾರೆ (ಐಸಿಎಐ). ಅವರು 2005-06 ರಲ್ಲಿ ಐ ಸಿ ಎ ಐ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಹಾಗೂ 2004-05 ರಲ್ಲಿ ಐ ಸಿ ಎ ಐ ನ ಉಪಾಧ್ಯಕ್ಷರೂ ಆಗಿದ್ದರು. ಅವರು 1998 ರಿಂದ 2007 ರವರೆಗೆ ಐ ಸಿ ಎ ಐ ನ ಕೇಂದ್ರ ಸಮಿತಿಯ ಚುನಾಯಿತ ಸದಸ್ಯರಾಗಿದ್ದರು. ಅಲ್ಲಿಂದ ನಂತರ 2007-09 ರಲ್ಲಿ ಏಷಿಯನ್ ಮತ್ತು ಪೆಸಿಫಿಕ್ ಅಕೌಂಟೆಂಟ್ ಗಳ ಒಕ್ಕೂಟದ (ಸಿ ಎ ಪಿ ಎ) ಅಧ್ಯಕ್ಷರಾಗಿದ್ದರು ಮತ್ತು 2005-07 ರಲ್ಲಿ ಸಿ ಎ ಪಿ ಎ ಯ ಉಪಾಧ್ಯಕ್ಷರೂ ಆಗಿದ್ದರೂ. ಅವರು 2005-08 ರ್ರೆಗೆ ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಅಕೌಂಟೆಂಟ್ಸ್ ನ ಸಮಿತಿಯ ಸದಸ್ಯರಾಗಿದ್ದರು. ಅವರು M/s ಖೀಮ್ಜೀ ಕುಂವರ್ ಜೀ & ಕೋ ನ ಸಹಯೋಗದೊಂದಿಗೆ 1982 ರವರೆಗೆ ಹಿರಿಯ ಪಾಲುದಾರರಾಗಿದ್ದರು. ಅವರು ಯುನೈಟೆಡ್ ನೇಶನ್ಸ್ ನೊಳಗೆ ಆಡಳಿತದ ವಿಸ್ತಾರ ಪರಿಷ್ಕರಣೆ ಮತ್ತು ಮೇಲ್ನೋಟದ ಚಾಲಿತ ಸಮಿತ್ಯ ಸದಸ್ಯರಾಗಿರುವುದೂ ಒಳಗೊಂಡಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಲಹೆ ಮತ್ತು ತಜ್ಞರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Mona-Bhideಮಿಸ್ ಮೋನಾ ಭಿಡೆ:

ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಕಾಂ ಎಲ್ ಎಲ್ ಬಿ, ಷಿಕಾದೋದ ಕಾನೂನು ಶಾಲೆಯ ನಾರ್ತ್ ವೆಸ್ಟ್ ವಿಶ್ವವಿದ್ಯಾನಿಲಯದಿಂದ ಎಲ್ ಎಲ್ ಎಂ ಪಡೆದಿದ್ದು, ಅಂತಾರಾಷ್ಟ್ರೀಯ ಹಣಕಾಸು ಮತ್ತು ಕಾರ್ಪೊರೇಟ್ ಕಾನೂನುಗಳನ್ನು ಕೇಂದ್ರೀಕರಿಸಿ ಕಾನೂನು ಸಂಸ್ಥೆಯಾದ ಡೇವ್ & ಗಿರೀಶ್ & ಕೋ ನಲ್ಲಿ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಅವರು ವಿವಿಧ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಲಹಾಗಾರರೂ ಆಗಿದ್ದಾರೆ.

ಅವರು ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್, ಬಾಂಬೆ ಬಾರ್ ಅಸೋಸಿಯೇಶನ್, ಇಂಟರ್ ನ್ಯಾಷನಲ್ ಸ್ವ್ಯಾಪ್ಸ್ ಅಂಡ್ ಡಿರೈವೇಟೀವ್ಸ್ ಅಸೋಸಿಯೇಶನ್, ಇಂಟರ್ನ್ ನ್ಯಾಷನಲ್ ಬಾರ್ ಅಸೋಸಿಯೇಶನ್, ನ್ಯೂಯಾರ್ಕ್ ಸ್ಟೇಟ್ ಬಾರ್ ಅಸೋಸಿಯೇಶನ್, ಇಂಟರ್ ಪೆಸಿಫಿಕ್ ಬಾರ್ ಅಸೋಸಿಯೇಶನ್ ಮತ್ತು ಏಷ್ಯಾ ಪೆಸಿಫಿಕ್ ಲೋನ್ ಮಾರ್ಕೆಟ್ ಅಸೋಸಿಯೇಶನ್ ನ ಸದಸ್ಯರಾಗಿದ್ದಾರೆ.

ಅವರು ಹೂಡಿಕೆ ಬ್ಯಾಂಕಿಂಗ್, ಸಂಘರ್ಷಗಳು ಮತ್ತು ಕಾನೂನು ವೃತ್ತಿಯ ಜಾಗತೀಕರಣದ ಕ್ಷೇತ್ರದಲ್ಲಿ ಬಾರ್ ಅಸೋಸಿಯೇಶನ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ, ಸೆಡ್ ವಿಕ್, ಡೀಟರ್ಟ್ ಮೊರಾನ್ ಅಮ್ಡ್ ಆರ್ನಾಲ್ಡ್ ನೊಂದಿಗೂ ಕಾರ್ಯ ನಿರ್ವಹಿಸಿದ್ದಾರೆ.

ಇವರು ಭಾರತದ ಜಾಗತಿಕ ಸಲಹಾಸಮಿತಿ 3000 ದಲ್ಲಿ ಯೋಜನಾ ಹಣಕಾಸು ಮತ್ತು ಕಾರ್ಪೊರೇಟ್, ವಿಲೀನತೆ ಮತ್ತು ಸ್ವಾಧೀನತಾ ವಹಿವಾಟು, ಪುನಾರಚನೆ ಮತ್ತು ಋಣಮುಕ್ತತೆಯ ಪ್ರಾಕ್ಟಿಷನರ್ ಮತ್ತು ಕಾರ್ಪೊರೇಟ್ ವಹಿವಾಟು ಪ್ರಾಕ್ಟಿಷನರ್ ಆಗಿ ಹೆಚ್ಚು ಪ್ರಸಿದ್ಧ ವಕೀಲರಾಗಿದ್ದಾರೆ.

ಅವರು ಬ್ಯಾಂಕಿಂಗ್ ಮತ್ತು ಹಣಕಾಸು, ಕಾರ್ಪೊರೇಟ್, ವಿಲೀನತೆ ಮತ್ತು ಸ್ವಾಧೀನತೆ ಹಾಗೂ ಕಾನೂನು 500 ನಿಂದ ಸಂಘರ್ಷ ಪರಿಹಾರ ಮತ್ತು ಪ್ರಮುಖ ಏಷ್ಯಾ ಕಾನೂನು ವಿವರಗಳಲ್ಲಿ ಪ್ರಮುಖ ವ್ಯಕ್ತಿಯಾಗಿ ದರ್ಜೆಯನ್ನು ಹೊಂದಿದ್ದಾರೆ.

Warendra-Sinhaಮಿ ವರೇಂದ್ರ ಸಿನ್ಹಾ – ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ:

ಮಿ ವರೇಂದ್ರ ಸಿನ್ಹಾ  ಇವರು ನವದೆಹಲಿ ವಿಶ್ವವಿದ್ಯಾನಿಲಯದ ಹಂಸರಾಜ್ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ನವದೆಹಲಿಯ ಜವಹಾರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 1982 ರಲ್ಲಿ ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿ ಗೆ ಸೇರಿ, ಅಲ್ಲಿ ಶಾಖೆ, ವಲಯ, ಮತ್ತು ಪ್ರಾದೇಶಿಕ ಅಧಿಕಾರಿಯಾಗಿ 2008 ರವರೆಗೂ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದರು. ಈ ನಡುವೆ, ಅವರು ಕೀನ್ಯಾದ ನೈರೋಬಿಯ ಜೆನ್ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ ನಲ್ಲಿ 4 ವರ್ಷಗಳ ಡೆಪ್ಯುಟೇಶನ್ ಸಹ ನಿರ್ವಹಿಸಿದ್ದಾರೆ. 2008 ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದ ನಂತರ, ಅವರು ಕೊಲ್ಕತ್ತಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿ ನಲ್ಲಿ ಮಾರ್ಕೆಟಿಂಗ್, ಜಾಹೀರಾತು ಮತ್ತು ಬಿಪಿಆರ್ ಗಳನ್ನು ನಿರ್ವಹಿಸುತ್ತಿದ್ದಾರೆ.

ಮಿ ಸಿನ್ಹಾ ಅಕ್ಟೋಬರ್ 2012 ರಲ್ಲಿ ಜನರಲ್ ಮ್ಯಾನೇಜರ್ ಆಗಿ ಜಿಐಸಿ ರೇ ಗೆ ಸೇರಿದ್ದು, ನಂತರ ಜಿಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿದರು.

ಭಾರತೀಯ ವಿಮಾ ಸಂಸ್ಥೆಯ ಸಹಯೋಗಿಯಾಗಿ, ಮಿ. ಸಿನ್ಹಾ ಆಟಗಳು, ಸಂಗೀತ, ಓದುವುದು ಮತ್ತು ಪ್ರಯಾಣದಲ್ಲಿ ಆಸಕ್ತಿ ಹೊಂದಿದ್ದಾರೆ. ಮಿ ಸಿನ್ಹಾ ದೃಢವಾದ ಸಂವಹನ, ಉತ್ತಮ ತಂಡ ನಿರ್ವಹಣಾ ಸಾಮರ್ಥ್ಯ ಮತ್ತು ಅತ್ಯದ್ಭುತ ಗ್ರಾಹಕ ಸಂಬಂಧ ಸುಧಾರಣೆಯಲ್ಲಿ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

Leave a Reply

Your email address will not be published. Required fields are marked *

*
*
Website