ಆಹಾರ, ಬಟ್ಟೆ ಮತ್ತು ಶಿಕ್ಷಣಗಳ ಮೂರು ಪ್ರಮುಖ ಅಗತ್ಯಗಳೊಂದಿಗೆ ಮನೆಯೂ ಪ್ರತಿಯೊಬ್ಬ ಮಾನವ ಜೀವಿಗೂ ಅತ್ಯಗತ್ಯವಾಗಿದೆ. ಮನೆ ಎನ್ನುವುದು ಒಂದು ಪ್ರಮುಖ ಅಂಗವಾಗಿದ್ದು, ಇದು ವ್ಯಕ್ತಿಯ ಸಾಮಾಜಿಕ-ಆರ್ಥಿಕ ಸ್ಥಾನಮಾನವನ್ನು ಅಳೆಯುತ್ತದೆ. ಪಾಲಿಸಿ ಆರಂಭಗಳು ಮತ್ತು ಅಡೆತಡೆಗಳ ಪರಿಭಾಷೆಯಲ್ಲಿ ಇದನ್ನು ಗಂಭೀರ ವಲಯ ಎಂದು ಗುರುತಿಸಲಾಗಿದೆ. ಸಾಮಾಜಿಕ ಅಗತ್ಯವಾಗಿ ಮನೆಯ ಪ್ರಾಮುಖ್ಯತೆ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದ್ದು, ಇದು ಶಿಲಾಯುಗದ ಕಾಲದಿಂದಲೂ ಮಾನವನಿಂದ ಅನೇಕ ನಾವೀನ್ಯತೆ ಮತ್ತು ಅನ್ವೇಷಣೆಗಳಿಂದ ಪ್ರಭಾವಿತವಾಗಿದೆ.

ಮನೆ ಎನ್ನುವುದು ಮಾನವನ ಪ್ರಮುಖ ಅಗತ್ಯವಾಗಿರುವುದರಿಂದ, ಆಶ್ರಯಕ್ಕಾಗಿ ಬೇಡಿಕೆಯು ಜನಸಂಖ್ಯೆ ಹಾಗೂ ಜೀವನದ ಗುಣಮಟ್ಟ ಬದಲಾದಂತೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದ್ದರಿಂದ ಮನೆಯನ್ನು ಖರೀದಿಸಲು ಹಣಕಾಸಿನ ಅಗತ್ಯ ಕಂಡುಬಂದಿದೆ. ಗೃಹ ವಲಯದ ಪ್ರಾಮುಖ್ಯತೆಯನ್ನು ನಾವು ಮನೆಯನ್ನು ಹೂಡಿಕೆ ಎಂದು ಪರಿಗಣಿಸಿದಾಗ ಮತ್ತು ನಾವು ಕಷ್ಟಪಟ್ಟು ಗಳಿಸಿದ ಹಣ ಅಥವಾ ಉಳಿತಾಯವನ್ನು ಮನೆಯ ಮೇಲೆ ಹೂಡಲು ಬಯಸುವ ಅಂಶಗಳಿಂದ ನಿರ್ಧರಿಸಬಹುದಾಗಿದೆ. ಮನೆ ಖರೀದಿಸಲು ಹಣಕಾಸಿನ ಅಗತ್ಯತೆಯು ವಿಶಿಷ್ಟ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳ ಉಗಮಕ್ಕೆ ಕಾರಣವಾಗಿದೆ. ಹೌಸಿಂಗ್ ಫೈನಾನ್ಸ್ ಕಂಪನಿಗಳು (ಹೆಚ್ ಎಫ್ ಸಿ) ಎಂದು ಇಂದು ಕರೆಯಲಾಗುವ ಇವು, ಗೃಹವಲಯದ ಬೆಳವಣಿಗೆಗೆ ಅನೇಕ ವರ್ಷಗಳಿಂದ ಕೊಡುಗೆ ನೀಡಲು ಹಣ ನೀಡುತ್ತಾ ಬಂದಿದೆ. ಅವರ ಶಕ್ತಿ ಕೇವಲ ಗೃಹ ವಲಯಕ್ಕೆ ಸಾಲ ನೀಡುವ ವಿಶಿಷ್ಟತೆಯಲ್ಲಿದೆ. ಇದು ಜಿ ಐ ಸಿ ಹೌಸಿಂಗ್ ಫೈನಾನ್ಸ್ ಲಿ (ಜಿ ಐ ಸಿ ಹೆಚ್ ಎಫ್ ಎಲ್) ನ ಹಿನ್ನೆಲೆಯಾಗಿದೆ.

ಜಿಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, 12 ನೇ ಡಿಸೆಂಬರ್ 1989 ರಂದು ’ಜಿಐಸಿ ಗೃಹ ವಿತ್ತ ಲಿಮಿಟೆಡ್’ ಎನ್ನುವ ಹೆಸರಿನಲ್ಲಿ ಆರಂಭವಾಯಿತು. ನವೆಂಬರ್ 16, 1993 ರಲ್ಲಿ ನೀಡಲಾದ ಅಳವಡಿಕೆಯ ತಾಜಾ ಪ್ರಮಾಣಪತ್ರ ಇಂದು ಇದರ ಪ್ರಸ್ತುತ ಹೆಸರಿನ ಬದಲಾವಣೆಗೆ ಕಾರಣವಾಗಿದೆ. ಕಂಪನಿಯು ವ್ಯಕ್ತಿಗಳಿಗೆ ಮತ್ತು ಇತರ ಕಾರ್ಪೊರೇಟ್ ಗಳಿಗೆ ಭಾರತದಲ್ಲಿ ಗೃಹನಿರ್ಮಾಣ ಚಟುವಟಿಕೆಯನ್ನು ಉತ್ತೇಜಿಸುವ ದಿಕ್ಕಿನಲ್ಲಿ ನೇರವಾಗಿ ಸಾಲ ನೀಡುವ ಕ್ಷೇತ್ರಕ್ಕೆ ಪ್ರವೇಶಿಸುವ ಉದ್ದೇಶವನ್ನು ಹೊಂದಿತ್ತು. ಜಿ ಐ ಸಿ ಹೆಚ್ ಎಫ್ ಎಲ್ ನ ಪ್ರಾಥಮಿಕ ಉದ್ದಿಮೆಯೆಂದರೆ ವ್ಯಕ್ತಿಗಳಿಗೆ ಮತ್ತು ವಾಸದ ಉದ್ದೇಶಕ್ಕಾಗಿ ಗೃಹ/ಫ್ಲ್ಯಾಟ್ ಗಳ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿಗಳು/ಸಹಯೋಗಗಳಿಗೆ ಗೃಹ ಸಾಲ ನೀಡುವುದು. ಕಂಪನಿಯು ಭಾರತದಲ್ಲಿ ಗೃಹನಿರ್ಮಾಣದ ಭವಿಷ್ಯದ ದೂರದೃಷ್ಟಿಯನ್ನು ಕೊಂಡೊಯ್ಯುತ್ತಿದೆ. ಹಾಗೂ ಜಿ ಐ ಸಿ ಹೆಚ್ ಎಫ್ ಎಲ್ ಕೆಳಗಿನ ತತ್ವಗಳ ಆಧಾರದ ಮೇಲೆ ತನ್ನ ಯಶಸ್ಸು ಮತ್ತು ಬೆಳವಣಿಗೆಯನ್ನು ಹೊಂದಿದೆ ಎನ್ನುವ ವಿಶ್ವಾಸ ಹೊಂದಿದೆ:

  • ಗ್ರಾಹಕ ಸ್ನೇಹಿ ಹಣಕಾಸು ಯೋಜನೆಯ ಮೂಲಕ ಸೇವಾ ಕೇಂದ್ರಿತ ವಾತಾವರಣದೊಳಗೆ ಗೃಹ ನಿರ್ಮಾಣ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಪ್ರಮುಖ ಕಾರ್ಪೊರೇಟ್ ನಾಗರಿಕನಾಗಲು.
  • ಸ್ಪರ್ಧಾತ್ಮಕ ವಾತಾವರಣದಲ್ಲಿ ಉತ್ತಮ ಕಾರ್ಪೊರೇಟ್ ನಾಗರಿಕನ ನೈತಿಕ ಮೌಲ್ಯಗಳನ್ನು ಪ್ರತಿಫಲಿಸಿ ಅನುಸರಣೆ ಮತ್ತು ಬೆಳವಣಿಗೆ ಹೊಂದಲು.
  • ಷೇರುದಾರರಿಗೆ ಸಂಪತ್ತು ಮತ್ತು ಕೊಡುಗೆಗಳನ್ನು ಸೃಷ್ಟಿಸಲು

ಕಂಪನಿಯು ಭಾರತದ ಸಾಮಾನ್ಯ ವಿಮಾ ಕಾರ್ಪೊರೇಷನ್ ನಿಂದ ಪ್ರೋತ್ಸಾಹಿಸಲ್ಪಟ್ಟಿದ್ದು, ಇದರ ಸಹಯೋಗಗಳಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್, ದ ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಹಾಗೂ ಯುಟಿಐ, ಐಸಿಐಸಿಐ, ಐ ಎಫ್ ಸಿ ಐ, ಹೆಚ್ ಡಿ ಎಫ್ ಸಿ, ಮತ್ತು ಎಸ್ ಬಿ ಐ ಗಳೊಂದಿಗೆ ಸೇರಿ, ಎಲ್ಲವೂ ಆರಂಭಿಕ ಷೇರು ಬಂಡವಾಳಕ್ಕೆ ಕೊಡುಗೆ ನೀಡುವ ಬದ್ಧತೆ ಹೊಂದಿವೆ.

ಜಿ ಐ ಸಿ ಹೆಚ್ ಎಫ್ ಎಲ್ ಉದ್ದಿಮೆಗಾಗಿ ದೇಶಾದ್ಯಂತ 53 ಶಾಖೆಗಳನ್ನು ಹೊಂದಿದೆ. ಇದು ಸದೃಢ ಮಾರುಕಟ್ಟೆ ತಂಡವನ್ನು ಹೊಂದಿದ್ದು, ಇದು ಮಾರಾಟ ಸಹಯೋಗಗಳಿಂದ (ಎಸ್ ಎ) ನೆರವು ಪಡೆಯುತ್ತಿದೆ. ಇದು ವ್ಯಕ್ತಿಗತ ಸಾಲದಾರರಿಗೆ ಹಣಕಾಸು ನೀಡಲು ಬಿಲ್ಡರ್ ಗಳೊಂದಿಗೆ ಅನುಸರಣೆಯನ್ನು ಹೊಂದಿದೆ. ಇದು ವಿವಿಧ ಹೌಸಿಂಗ್ ಫೈನಾನ್ಸ್ ಅಗತ್ಯತೆಗಳಿಗಾಗಿ ಕಾರ್ಪೊರೇಟ್ ಗಳೊಂದಿಗೂ ಸಹ ಅನುಸರಣೆ ಹೊಂದಿದೆ.

ಕಂಪನಿಯ ಇತಿಹಾಸದಲ್ಲಿನ ಪ್ರಮುಖ ಘಟನೆ
ವರ್ಷ ಘಟನೆ
1989 ಕಂಪನಿಯು “ಜಿಐಸಿ ಗೃಹ ವಿತ್ತ ಲಿಮಿಟೆಡ್” ಎಂದು ನೋಂದಾಯಿತವಾಯಿತು.
1989-91 ಕಂಪನಿ 8 ಸ್ಥಳಗಳಲ್ಲಿ ತನ್ನ ಕಾರ್ಯನಿರ್ವಹಣೆ ಆರಂಭಿಸಿತು
1991-92 ಕಂಪನಿಯು ಉದ್ಯೋಗಿ ಮತ್ತು ಬಿಲ್ಡರ್ ಯೋಜನೆಯ ಹೌಸಿಂಗ್ ಸ್ಕೀಮ್ ಆರಂಭಿಸಿತು
1992-93 ಕಂಪನಿಯು “ಜಿಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್” ಎಂದು ಬದಲಾಯಿತು. ಅಪ್ನಾ ಘರ್ ಯೋಜನಾವನ್ನು ಕಂಪನಿ ಪರಿಚಯಿಸಿತು
1993-94 ಕಂಪನಿ 1:1 ರ ಹಕ್ಕುಗಳ ನೀಡಿಕೆಯನ್ನು ಆರಂಭಿಸಿತು; ಬಂಡವಾಳ ರೂ. 10 ಕೋಟಿಯನ್ನು ಮುಟ್ಟಿತು
1994-95 ಕಂಪನಿಯು ತನ್ನ ಪ್ರಥಮ ಐಪಿಓ ಆರಂಭಿಸಿತು ಹಾಗೂ ರೂ. 40 ಕೋಟಿ ಹೆಚ್ಚುವರಿ ಬಂಡವಾಳ ಆರಂಭಿಸಿತು
1996-97 ಕಂಪನಿ ಕಂಪ್ಯೂಟರೈಸೇಶನ್ ಪ್ರಕ್ರಿಯೆ ಆರಂಭಿಸಿತು
2003-04 ಕಂಪನಿ ಸಾಲ ನೀಡಿಕೆ, ವಿತರಣೆ, ಲಾಭದಾಯಕತೆಯಲ್ಲಿ 40% ಗೂ ಅಧಿಕ ಉದ್ದಿಮೆ ಅಭಿವೃದ್ಧಿ ದರ ದಾಖಲಿಸಿತು. ಇದರ ಪರಿಣಾಮವಾಗಿ ಕಂಪನಿ ವೈಯಕ್ತಿಕ ಗೃಹ ಸಾಲದಲ್ಲಿ ರೂ. 500 ಕೋಟಿ ವಾರ್ಷಿಕ ಉದ್ದಿಮೆ ದಾಟಿತು ಹಾಗೂ ಇದರ ಒಟ್ಟು ವಿವರ ರೂ. 1000 ಕೋಟಿ ಮೀರಿತು.
2004-05 ಕಂಪನಿ ಸಾಲ ನೀಡಿಕೆ, ವಿತರಣೆ, ಲಾಭದಾಯಕತೆಯಲ್ಲಿ 40% ಗೂ ಅಧಿಕ ಉದ್ದಿಮೆ ಅಭಿವೃದ್ಧಿ ದರ ದಾಖಲಿಸಿತು. ಹೊಂದಿರುವ ಪ್ರತೀ 2 ಷೇರುಗಳಲ್ಲಿ 1 ಈಕ್ವಿಟಿ ಷೇರಿನ ಪ್ರಮಾಣದಲ್ಲಿ ರೂ. 16 ರಲ್ಲಿ 89,75,561 ಈಕ್ವಿಟಿ ಷೇರುಗಳ ಸರಿಯಾದ ವಿತರಣೆ ಮಾಡಿತು. ಪಾವತಿಸಲಾದ ಬಂಡವಾಳ ರೂ. 29.93 ಕೋಟಿಗೆ ಬೆಳೆಯಿತು.
2005-06 ಎನ್ ಪಿ ಎ ಮತ್ತು ಲಾಭದಾಯಕತೆಯ ಅನುಸರಣೆಯ ಮೇಲೆ ಕೇಂದ್ರೀಕರಣ
2006-07 ಸರಿಯಾದ ನೀಡಿಕೆ - ಪ್ರತೀ 1 ಈಕ್ವಿಟಿ ಷೇರಿಗೆ ಪ್ರತೀ 1 ಈಕ್ವಿಟಿ ಷೇರಿನ ಅನುಪಾತದಲ್ಲಿ ಕಂಪನಿಯ ಈಕ್ವಿಟಿ ಷೇರುದಾರರಿಗೆ ಪ್ರತೀ ಷೇರಿಗೆ ರೂ. 30 ರ ಪ್ರೀಮಿಯಂನಂತೆ ರೂ.10/- ರ ಮುಖಬೆಲೆಯ 2,69,25,533 ಸಂಖ್ಯೆಯ ಈಕ್ವಿಟಿ ಷೇರುಗಳನ್ನು ರೂ. 107,70,21,320 ಸರಾಸರಿಯಲ್ಲಿ ಮೇ 19, 2006 ರಂದು ನೀಡಲಾಯಿತು. ಸರಿಯಾದ ನೀಡಿಕೆಯ ನಂತರ, ಕಂಪನಿಯ ಷೇರು ಬಂಡವಾಳ ರೂ. 26.93 ಕೋಟಿಗೆ ಹೆಚ್ಚಿದ್ದು, ಷೇರು ಪ್ರೀಮಿಯಂ ರೂ. 80.78 ಕೋಟಿಯಾಗಿದೆ. ಪಾವತಿಸಲಾದ ಬಂಡವಾಳ 31 ನೇ ಮಾರ್ಚ್ 2007 ರಂದು ರೂ. 53.86 ಆಗಿದೆ.ಹಿಂದಿನ ವರ್ಷದ 15% ಗೆ ಹೋಲಿಸಿದರೆ ಲಾಭಾಂಶ ಘೋಷಣೆಯ ಪ್ರತಿಶತ ಈ ವರ್ಷ 30% ಏರಿಕೆಯಾಗಿದೆ.ಈ ವರ್ಷ ಕಂಪನಿ ಮಹಾರಾಷ್ಟ್ರದ ಮುಂಬೈನ ಪಶ್ಚಿಮ ವಲಯದಲ್ಲಿ ವೀರಾರ್ ನಲ್ಲಿ ತನ್ನ ಶಾಖೆಯನ್ನು ತೆರೆಯಿತು. ಈ ವರ್ಷ
2007-08 ವೈಯಕ್ತಿಕ ಸಾಲ ವಿವರ ರೂ. 2000 ದಾಟಿದ್ದು ಮಾರ್ಚ್ 31, 2008 ರಂದು ರೂ. 2427.35 ಕೋಟಿಗೆ ನಿಂತಿತ್ತು.
2008-09 ಈ ವರ್ಷ ವೈಯಕ್ತಿಕ ಸಾಲ ವಿವರ ರೂ. 2500 ಕೋಟಿ ದಾಟಿದ್ದು, ಮಾರ್ಚ್ 31, 2009 ರಂದು ರೂ. 2682 ಕೋಟಿಗೆ ನಿಂತಿತ್ತು.
2009-10 ಆ ವರ್ಷದಲ್ಲಿ ಕಂಪನಿ ತನ್ನ ಮೊದಲ ಶಾಖೆಯನ್ನು ಗುಜರಾತಿನ ವಡೋದರಾದಲ್ಲಿ ತೆರೆಯಿತು ಹಾಗೂ ತನ್ನ ಸಂಪರ್ಕಜಾಲವನ್ನು ಮಹಾರಾಷ್ಟ್ರದ ನಾಗಪುರ ಮತ್ತು ನಾಸಿಕ್ ನಲ್ಲಿ ವಿಸ್ತರಿಸಿತು.ಜೀವ ವಿಮಾ ಕಂಪನಿಯೊಂದಿಗೆ ನಾವು ಸಹಯೋಗವನ್ನು ಹೊಂದುವುದರೊಂದಿಗೆ ಹೆಚ್ಚುವರಿ ಸಾಲದ ಮೊಬಲಗನ್ನು ವಿಸ್ತರಿಸಲು ಅರ್ಹ ಸಾಲಗಾರರಿಗೆ ಐಚ್ಛಿಕ ಸಮೂಹ ವಿಮಾ ರಕ್ಷೆಯನ್ನು ಪರಿಚಯಿಸಿದೆವು.
2010-11 ಆ ವರ್ಷ ಅನುಮೋದಿತವಾದ ವೈಯಕ್ತಿಕ ಸಾಲ ರೂ. 1000 ಕೋಟಿ ಮೀರಿತ್ತು. ಆ ವರ್ಷದಲ್ಲಿ ಅನುಮೋದಿತವಾದ ವೈಯಕ್ತಿಕ ಸಾಲ ರೂ. 1069 ಕೋಟಿ ಆಗಿತ್ತು. ವೈಯಕ್ತಿಕ ಸಾಲ ವಿವರ ರೂ. 3000 ಕೋಟಿ ದಾಟಿದ್ದು, ಮಾರ್ಚ್ 31, 2011 ರಲ್ಲಿ ಅದು ರೂ. 3406 ಕೋಟಿಗೆ ನಿಂತಿತ್ತು.55% ನಲ್ಲಿ ಘೋಷಿತವಾದ ಲಾಭಾಂಶ ಒಂದು ಬಾರಿಯ ವಿಶೇಷ ಲಾಭಾಂಶ 10% ರಾಜಸ್ಥಾನದ ಜೋಧಪುರದಲ್ಲಿ ಎರಡನೆಯ ಶಾಖೆಯನ್ನು ತೆರೆದಿದ್ದು, ಎರಡನೆಯ ಶಾಖೆಯನ್ನು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ತೆರೆದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಾಖೆಯನ್ನು ತೆರೆಯುವ ಮೂಲಕ ವಿಸ್ತರಿಸಿತು.
2011-12 ಆ ವರ್ಷದ ವೈಯಕ್ತಿಕ ಸಾಲ ವಿತರಣೆ ರೂ. 1000 ಕೋಟಿ ದಾಟಿದ್ದು, ಆ ವರ್ಷದಲ್ಲಿ ಅದು ರೂ. 1069ಕ್ಕೆ ನಿಂತಿತ್ತು. ವೈಯಕ್ತಿಕ ಸಾಲ ವಿವರ ರೂ. 3500 ಕೋಟಿ ದಾಟಿದ್ದು, ಮಾರ್ಚ್ 31, 2012 ರಲ್ಲಿ ಅದು ರೂ. 3864 ಕ್ಕೆ ಇದು ನಿಂತಿದೆ.ಕಂಪನಿ ತನ್ನ ಹೊಸ ಶಾಖೆಗಳನ್ನು ಮುಂಬೈ ಸಬರ್ಬ್ ಆದ ನೆರೆ ಪನ್ವೇಲ್ ನಲ್ಲಿ ಆರಂಭಿಸುವ ಮೂಲಕ ತನ್ನ ಉದ್ದಿಮೆಯನ್ನು ವಿಸ್ತರಿಸಿತು.
2012-13 ಕಂಪನಿ ತನ್ನ ಮೊದಲ ಶಾಖೆಯನ್ನು ಮಧ್ಯಪ್ರದೇಶದ ಇಂದೋರ್ ನಲ್ಲಿ ತೆರೆಯಿತು.
2013-14 ಕಂಪನಿ ತನ್ನ 43 ನೆಯ ಶಾಖೆಯನ್ನು ಪಾಟ್ನಾದಲ್ಲಿ ತೆರೆಯಿತು
2013-14 ಕಂಪನಿ ತನ್ನ 44 ನೆಯ ಶಾಖೆಯನ್ನು ಅಹ್ಮದಾಬಾದ್ ನಲ್ಲಿ ತೆರೆಯಿತು
2013-14 ಕಂಪನಿ ತನ್ನ 45 ನೆಯ ಶಾಖೆಯನ್ನು ಕಲ್ಯಾಣದಲ್ಲಿ ತೆರೆಯಿತು
2013-14 ಕಂಪನಿ ತನ್ನ 46 ನೇ ಶಾಖೆಯನ್ನು ಬೊರಿವಿಲಿಯಲ್ಲಿ ತೆರೆದಿದೆ
2013-14 ಕಂಪನಿ ತನ್ನ 47 ನೇ ಶಾಖೆಯನ್ನು ಡೆಹ್ರಾಡೂನ್ ನಲ್ಲಿ ತೆರೆದಿದೆ
2014-15 ಕಂಪನಿ ತನ್ನ 48 ನೇ ಶಾಖೆಯನ್ನು ಮೀರತ್ ನಲ್ಲಿ ತೆರೆದಿದೆ
2014-15 ಕಂಪನಿ ತನ್ನ 49 ನೇ ಶಾಖೆಯನ್ನು ಬೊಯ್ಸಾರ್ ನಲ್ಲಿ ತೆರೆದಿದೆ
2014-15 ಕಂಪನಿ ತನ್ನ 50 ನೇ ಶಾಖೆಯನ್ನು ಗಾಜಿಯಾಬಾದ್ ನಲ್ಲಿ ತೆರೆದಿದೆ
2014-15 ಕಂಪನಿ ತನ್ನ 51 ನೇ ಶಾಖೆಯನ್ನು ಮಾರ್ಗೊರಾದಲ್ಲಿ ತೆರೆದಿದೆ
2014-15 ಕಂಪನಿ ತನ್ನ 52 ನೇ ಶಾಖೆಯನ್ನು ದ್ವಾರಕಾದಲ್ಲಿ ತೆರೆದಿದೆ
2014-15 ಕಂಪನಿ ಈ ವರ್ಷ ತನ್ನ ರಜತ ಮಹೋತ್ಸವ ವಾರ್ಷಿಕೋತ್ಸವ ಆಚರಿಸುತ್ತಿದೆ